ಚಂದ್ರ ಗ್ರಹಣ 2023 ಭಾರತದಲ್ಲಿ ಗೋಚರಣೆ ಇದೆಯಾ?ಆಚರಣೆಯ ಕ್ರಮ!

0 73

Lunar Eclipse 2023:ಚಂದ್ರ ಗ್ರಹಣ ದಿನ ಹುಣ್ಣಿಮೆ ಬಂದಿರುವುದರಿಂದ ತುಂಬಾನೇ ವಿಶೇಷತೆ ಇದೆ. ಜೊತೆಗೆ ಹುಣ್ಣಿಮೆ ದಿನ ಚಂದ್ರನ ಪೂಜೆ ಮಾಡುವುದರಿಂದ ಸಕಲ ಸಂಕಷ್ಟದಿಂದ ನಿವಾರಣೆ ಆಗಬಹುದು ಎನ್ನುವ ನಂಬಿಕೆ ಇದೆ. ಚಂದ್ರ ಪೂಜೆ ಮಾಡುವ ದಿನ ಚಂದ್ರ ಗ್ರಹಣ ಇರುವುದು ಕೆಟ್ಟದ್ದಾ ಒಳ್ಳೆಯದ ಎನ್ನುವ ಕನ್ಫ್ಯೂಷನ್ ಎಲ್ಲರಿಗೂ ಇರುತ್ತದೆ.

ವೈಶಾಖ ಮಾಸ ಹುಣ್ಣಿಮೆ ಇರುವುದು ಮೇ 5ನೇ ತಾರೀಕು ಶುಕ್ರವಾರ. ಈ ಚಂದ್ರ ಗ್ರಹಣ ಸಮಯ ಶುರು ಆಗುವುದು ರಾತ್ರಿ 8:44 ನಿಮಿಷಕ್ಕೆ ಶುರುವಾದರೆ ಮುಗಿಯುವುದು ಮಧ್ಯರಾತ್ರಿ 1:01 ನಿಮಿಷಕ್ಕೆ.ಹುಣ್ಣಿಮೆ ಪೂಜೆಯನ್ನು ಆರಾಮಾಗಿ ಮಾಡಿಕೊಳ್ಳಬಹುದು.

ಇನ್ನು ಚಂದ್ರ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಹಾಗಾಗಿ ಆಚರಣೆ ಕೂಡ ಇರುವುದಿಲ್ಲ. ಇನ್ನು ಗರ್ಭಿಣಿಯರು, ಮಕ್ಕಳಿಗೆ ಹಾಲು ಕುಡಿಸುವವರು, ಅನಾರೋಗ್ಯದಿಂದ ಬಳಲುವರು ಚಿಕ್ಕ ಮಕ್ಕಳು ಇಂತಹ ಸಮಯದಲ್ಲಿ ಆದಷ್ಟು ಹೊರಗಡೆ ಹೋಗುವುದನ್ನು ಆದಷ್ಟು ಅವಾಯ್ಡ್ ಮಾಡಬಹುದು.

ಇನ್ನು ಯಾವುದೇ ಕಾರಣಕ್ಕೂ ಮಾಂಸಹರ ಸೇವನೆಯನ್ನು ಮಾಡಬಾರದು. ಇನ್ನು ಗ್ರಹಣದ ಸಮಯದಲ್ಲಿ ಮಾಡಿದ ಅಡುಗೆಯನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ.Lunar Eclipse 2023

ಪರಿಹಾರ : ಇವತ್ತಿನ ದಿನ ಶಿವನ ದೇವಸ್ಥಾನಕ್ಕೆ ಹೊಗಿ ನಾಲ್ಕು ಬೆಲ್ಲದಲ್ಲಿ ನೀವು ಜೋಡಿ ಬತ್ತಿಯನ್ನು ಇಟ್ಟು ತುಪ್ಪದಲ್ಲಿ ದೀಪವನ್ನು ಹಚ್ಚಿ ಶಿವನಿಗೆ ಆರತಿಯನ್ನು ಮಾಡಿ. ನಿಮ್ಮ ಸಕಲ ಸಂಕಷ್ಟಗಳನ್ನು ಶಿವನ ಮುಂದೆ ಹೇಳಿ ಪ್ರಾರ್ಥನೆ ಮಾಡಿ ಬಂದಿರುವುದರಿಂದ ಕೂಡ ಚಂದ್ರ ಗ್ರಹಣ ದೋಷ ನಿವಾರಣೆ ಆಗುತ್ತದೆ. ಶಿವ ಚಂದ್ರರ ಕೃಪೆ ನಿಮಗೆ ಸಿಗುತ್ತದೆ. ಇನ್ನು ಸಾಧ್ಯವಾದರೆ ಈ ಒಂದು ಮಂತ್ರವನ್ನು 108 ಬಾರಿ ಜಪ ಮಾಡಿ.
ಶ್ವೇತಃ ಶ್ವೇತಂಬರಧರಹಂ ಶ್ವೇತಶ್ವ ಶ್ವೇತವಾಹನಃ
ಗದಾಪಾಣಿ ದ್ವಾರ್ಬಹುಶ್ಚ ಕರ್ತವ್ಯ ವರದಹ ಶಶಿ…||

Leave A Reply

Your email address will not be published.