ಈ ಮೂರು ತರಕಾರಿ ತಿನ್ನಿ 100 ವರ್ಷದ ವರೆಗೂ ಕ್ಯಾಲ್ಸಿಯಂ ಕೊರತೆ ಆಗೋದೇ ಇಲ್ಲ. ಕೈ,ಕಾಲು, ಸೊಂಟ ನೋವು, ಮಂಡಿ ನೋವು ಬರೋದೇ ಇಲ್ಲ!

ಪ್ರತಿದಿನ ಎಷ್ಟೇ ತರಕಾರಿ ಪಲ್ಯ ತಿಂದರು ಯಾವುದು ಪೌಷ್ಟಿಕ ತರಕಾರಿ ಎಂದು ಯಾರಿಗೂ ತಿಳಿದಿರುವುದಿಲ್ಲ.ಈ ಮೂರು ತರಕಾರಿ ಸೇವನೆ ಮಾಡಿದರೆ ದೇಹಕ್ಕೆ ಪೌಷ್ಟಿಕಕಾಂಶ ಸಿಗುತ್ತದೆ.ದೇಹಕ್ಕೆ ಬೇಕಾದ ವಿಟಮಿನ್ ಕೊರತೆಯಿಂದ ಹಲವಾರು ಸಮಸ್ಯೆ ಕಾಡುತ್ತದೆ.ಈ ಮೂರು ತರಕಾರಿ ಸೇವಿಸಿದರೆ ಹಲವಾರು ದೇಹದ ಸಮಸ್ಸೆಯನ್ನು ನಿವಾರಿಸಿಕೊಳ್ಳಬಹುದು.

1, ಬ್ರೋಕಲಿ:ಈ ತರಕಾರಿಯಲ್ಲಿ ಫೈಬರ್, ಪ್ರೋಟೀನ್ ಅಂಶ ಹೆಚ್ಚಾಗಿ ಇರುತ್ತದೆ. ಈ ಬ್ರೋಕಲಿನಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿ ಇದೆ.ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಾಗಿ ಪ್ರೋಟಿನ್ ಸಿಗುತ್ತದೆ. ಇದರಿಂದ ದೇಹದಲ್ಲಿ ಇರುವ ಸೆಲ್ಸ್ ಗಳಿಗೆ ಆರೋಗ್ಯಕರ ಪ್ರಯೋಜನಗಳು ಸಿಗುತ್ತದೆ.ಇದು ದೇಹದಲ್ಲಿ ಆಂಟಿಆಕ್ಸಿಡೆಂಟ್, ಆಂಟಿಎಜಿಂಗ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ತುಂಬಾನೇ ಪೋಷಕಂಶ ಇರುವುದರಿಂದ ವಾರದಲ್ಲಿ ಎರಡು ಬಾರಿ ಸೇವನೆ ಮಾಡಬೇಕು.

ಇದನ್ನು ಬಳಸುವುದು ಹೇಗೆ ಎಂದರೆ, ಮೊದಲು ಬ್ರೋಕಲಿಯನ್ನು ನೀರಿನಲ್ಲಿ ತೊಳೆದುಕೊಂಡು ನಂತರ ಕುದಿಯುವ ನೀರಿನ ಒಳಗಡೆ ಈ ಬ್ರೋಕಲಿ ಹಾಕಿ.2 ನಿಮಿಷ ಅದಬಳಿಕ ಕಟ್ ಮಾಡಿ ಪಲ್ಯ ಮಾಡಿಕೊಂಡು ತಿನ್ನಬಹುದು.ಇಲ್ಲವಾದರೆ ಸಲಾಡ್ ತರ ಹಸಿ ತರಕಾರಿ ಸೇವಿಸಬಹುದು.ಬ್ರೋಕಲಿ ಸೇವಿಸುವುದರಿಂದ ಕಣ್ಣಿನ ಸಮಸ್ಯೆ, ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ, ಕ್ಯಾಲ್ಶಿಯಂ ಸಮಸ್ಯೆ ಇರುವವರು ಬ್ರೋಕಲಿ ಸೇವನೆ ಮಾಡುವುದು ಒಳ್ಳೆಯದು.ಗ್ಯಾಸ್, ಅಸಿಡಿಟಿ ಸಮಸ್ಸೆ ಇರುವವರು ಇದನ್ನು ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಸೆ ಇರುವುದಿಲ್ಲ.

2, ಸೋರೆಕಾಯಿ:ಇದು ಎಲ್ಲಾ ತರಕಾರಿ ಅಂಗಡಿಯಲ್ಲಿ ಸಿಗುತ್ತದೆ. ಈ ಸೋರೆಕಾಯಿಯಲ್ಲಿ ಬಿಪಿ, ಶುಗರ್ ಸಮಸ್ಯೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಇದರಲ್ಲಿದೆ. ಮುಖ್ಯವಾಗಿ ಸೋರೆ ಕಾಯಿ ದೇಹದಲ್ಲಿನ ರಕ್ತವನ್ನು ಶುದ್ದಿ ಮಾಡುವಂತಹ ಗುಣವನ್ನು ಹೊಂದಿದೆ. ಸೋರೆಕಾಯಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ಒಳ್ಳೆಯ ಹೆಲ್ತ್ ಬೆನಿಫಿಟ್ ಸಿಗುತ್ತದೆ.

ಸೋರೆಕಾಯಿ ಜ್ಯೂಸ್ ಅನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತುಂಬಾನೇ ಅರೋಗ್ಯ ಪ್ರಾಯೋಜನಕಾರಿ ಅಂಶ ಸಿಗುತ್ತದೆ.ಹೊಟ್ಟೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ರಕ್ತವನ್ನು ಶುದ್ಧೀಕರಿಸುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಡಯಾಬಿಟೀಸ್ ಹೃದಯಾಘಾತ, ಬಿಪಿ ಸಮಸ್ಯೆ ಬರುವುದಿಲ್ಲ.

3, ಹಸಿ ಬಟಾಣಿ:ಇದರಲ್ಲಿ ಫೈಬರ್,ಪ್ರೋಟೀನ್, ವಿಟಮಿನ್ಸ್, ಕಾರ್ಬೋಹೈಡ್ರೇಟ್ ಹೀಗೆ ತುಂಬಾನೇ ನ್ಯೂಟ್ರಿಯೆಂಟ್ಸ್ ಇದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ಸಿಗುತ್ತದೆ ಮತ್ತು ಇಂಮ್ಯೂನಿಟಿ ಸಿಸ್ಟಮ್ ಅನ್ನು ಬೂಸ್ಟ್ ಮಾಡುತ್ತದೆ.ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ಹಲವು ಕಾಯಿಲೆ ಸಮಸ್ಯೆಗಳು ಬೇಗನೆ ಕಡಿಮೆಯಾಗುತ್ತದೆ.ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಪೋಷಕಾಂಶ ಸಿಗುತ್ತದೆ.

Related Post

Leave a Comment