ಮನೆಯಲ್ಲಿ ಲಕ್ಷ್ಮೀದೇವಿ ಇರಬೇಕು ಅಂದರೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ!

0 47

ಶ್ರೀ ಮಹಾಲಕ್ಷ್ಮಿಯು ಸಮಸ್ತ ಲೋಕಕ್ಕೆ ಭಾಗ್ಯದಾತೆ,ಸರ್ವವನ್ನು ನೀಡುವಾಕೆ.ಇಂತಹ ಶ್ರೀ ಮಹಾಲಕ್ಷ್ಮೀಯನ್ನು ಮಂಗಳವಾರ ಮತ್ತು ಮುಖ್ಯವಾಗಿ ಶುಕ್ರವಾರ ಪೂಜಿಸುವುದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ ಎಂದು ನಂಬಲಾಗಿದೆ.ಇನ್ನು ದುರಾದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸಬಲ್ಲ ಶಕ್ತಿ ಶ್ರೀ ಮಹಾಲಕ್ಷ್ಮೀ ದೇವಿಗೆ ಇದೆ.ಶ್ರೀ ಮಹಾಲಕ್ಷ್ಮೀ ದೇವಿಯನ್ನು ಪಡೆಯಲು ಮಹಾವಿಷ್ಣು ಕಲಿಯುಗದಲ್ಲಿ ವೆಂಕಟನಾಥನಾಗಿ ಧರೆಗಿಳಿದು ಮಹಾಲಕ್ಷ್ಮಿಯನ್ನು ಪಡೆದುಕೊಂಡನಂತೆ ಹಾಗಾಗಿಯೇ ಶ್ರೀಮನ್ನಾರಾಯಣನ ವಕ್ಷ ಸ್ಥಳದಲ್ಲಿ ಮಹಾಲಕ್ಷ್ಮಿಯನ್ನು ನಾವು ಕಾಣಬಹುದಾಗಿದೆ.ಇನ್ನೂ ಇಂತಹ ಮಹಾಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮನೆಯ ಮೇಲೆ ಇರಬೇಕೆಂದರೆ ನಾವು ಹಲ ಕೆಲವು ನಿಯಮಗಳನ್ನು ಪಾಲಿಸಬೇಕು .ಆ ನಿಯಮಗಳು ಯಾವುವು ಎಂದು ತಿಳಿಯೋಣ ಬನ್ನಿ..

ಪ್ರತಿನಿತ್ಯ ದೇವರಿಗೆ ಲಕ್ಷ್ಮೀಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಹಾಗೂ ಇದರಿಂದ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ನಿಮ್ಮ ಮನೆಯ ಮೇಲೆ ಸದಾ ಇರುತ್ತದೆ.ಮನೆಯನ್ನು ಆದಷ್ಟೂ ಶುಭ್ರವಾಗಿ ಶುಚಿಯಾಗಿಟ್ಟುಕೊಳ್ಳಿ ಇದರಿಂದ ಲಕ್ಷ್ಮೀ ಪ್ರಸನ್ನ ಗೊಂಡು ನಿಮಗೆ ಆಶೀರ್ವಾದ ಮಾಡುತ್ತಾಳೆ.ಇನ್ನು ಮನೆಯ ಮುಂದೆ ಪ್ರತಿದಿನ ಬೆಳಿಗ್ಗೆ ಹೊಸ್ತಿಲನ್ನು ತೊಳೆದು,ಹೂವುಗಳನ್ನು ಅರ್ಪಿಸಿ ಪೂಜೆ ಮಾಡಬೇಕು ಹಾಗೂ ಮುಖ್ಯವಾಗಿ ಮನೆಯ ಮುಂದೆ ಹಾಕಿರುವ ರಂಗೋಲಿಯು ದೇವಿಯನ್ನು ಆಹ್ವಾನಿಸುವ ವಂತಿರಬೇಕು.ಇನ್ನು ಪ್ರತಿ ಶುಕ್ರವಾರ ತಪ್ಪದೇ ತುಳಸಿ ಪೂಜೆಯನ್ನು ಮಾಡಲೇಬೇಕು.
ಹೀಗೆ ಮಾಡುವುದರಿಂದ ತುಳಸಿ ಪ್ರಸನ್ನಗೊಳ್ಳುತ್ತಾಳೆ

ಇನ್ನೂ ಶ್ರೀಮಹಾಲಕ್ಷ್ಮಿಯ ಪೂಜೆಗೆ ಮುನ್ನ ಗಣಪತಿಯ ಪೂಜೆಯನ್ನು ಮಾಡಿ ನಂತರ ಶ್ರೀ ಮಹಾಲಕ್ಷ್ಮಿ ಪೂಜೆ ಮಾಡಬೇಕು.ಇನ್ನು ಕೇವಲ ಲಕ್ಷ್ಮೀಯನ್ನು ಪೂಜಿಸಬಾರದು.ಪತಿ ಪತ್ನಿ ಇಬ್ಬರು ಅಂದರೆ ಶ್ರೀ ನಾರಾಯಣನ ಜೊತೆ ಲಕ್ಷ್ಮೀ ಇರುವಂತಹ ಫೋಟೋವನ್ನು ಇಟ್ಟು ಪೂಜಿಸಬೇಕು.ಇನ್ನು ಪ್ರತಿನಿತ್ಯ ದೇವರಿಗೆ ಅಲಂಕಾರ ಮಾಡಿ ದೀಪ , ಧೂಪ ಬೆಳಗಿ ಮಾಡಿ ಪೂಜಿಸಬೇಕು.ಇನ್ನೂ ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವಿ ಮಹಾಲಕ್ಷ್ಮೀ ಖಂಡಿತವಾಗಿಯೂ ನೆಲಸುತ್ತಾಳೆ ಹಾಗಾಗಿ ಮನೆಯ ಸ್ವಚ್ಛತೆಗೆ ಮೊದಲು ಒತ್ತು ನೀಡಿ.

ಇನ್ನು ಯಾವುದೇ ಕಾರಣಕ್ಕೂ ಮನೆಯ ಹೆಣ್ಣು ಮಕ್ಕಳ ಕಣ್ಣಲ್ಲಿ ಮುಖ್ಯವಾಗಿ ಮಂಗಳವಾರ ಮತ್ತು ಶುಕ್ರವಾರ ಕಣ್ಣೀರು ಹಾಕದಂತೆ ನೋಡಿಕೊಳ್ಳಿ.ಇನ್ನೂ ಬಹಳ ಮುಖ್ಯವಾಗಿ ಬಾಹ್ಯವಾಗಿ ಸೂಚಿಗೊಳ್ಳುವುದಕ್ಕೂ ಮುನ್ನ ಆಂತರಿಕವಾಗಿ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ಇದರಿಂದ ಮನೆಯ ಸದಸ್ಯರೆಲ್ಲರ ಮೇಲು ಲಕ್ಷ್ಮೀ ಕೃಪಾಕಟಾಕ್ಷ ಉಂಟಾಗುತ್ತದೆ.ಇನ್ನು ಮನೆಗೆ ಬಂದ ಭಿಕ್ಷುಕರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಇದರಿಂದ ಒಳ್ಳೆಯದಾಗುತ್ತದೆ.

ಧನ್ಯವಾದಗಳು.

Leave A Reply

Your email address will not be published.