ಅವರೆಕಾಳು ಚಳಿಗಾಲದಲ್ಲಿ ಈ ಕಾಯಿಲೆಗೆ ಹೀಗೆ ಬಳಸಿ ನೋಡಿ!

Featured-article

ತರಕಾರಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲ್ಪಡುವ ಬೀನ್ಸ್ ನಲ್ಲಿ ಕೂಡ ಹಲವಾರು ಪ್ರಭೇದಗಳು ಇವೆ. ಇದರಲ್ಲಿ ಅವರೆಕಾಳು ಒಂದು ಮತ್ತು ಇದರ ತವರು ದಕ್ಷಿಣ ಅಮೇರಿಕ. ಆದರೆ ಇದು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬೆಳೆಸಲ್ಪಟ್ಟಟಿದೆ. ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಖಾನಿಜಾಂಶಗಳು ಪ್ರೋಟೀನ್ ಮತ್ತು ನಾರಿನಂಶ ಇದೆ.ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವರೆಕಾಳಿನ ಆರೋಗ್ಯದ ಲಾಭಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

1, ಅವರೆಕಾಳು ವಿಟಮಿನ್ ಬಿ ಇಂದ ಸಮೃದ್ಧವಾಗಿದೆ. ಇದು ದೇಹದ ಅಂಗಾಂಶಕ್ಕೆ ಬೇಕಾಗಿರುವ ಶಕ್ತಿಗಳನ್ನು ನೀಡುವುದು.2,ಅವರೆಕಾಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಮೆದುಳು ಮತ್ತು ನರಕೋಶಗಳನ್ನು ಸರಿಯಾಗಿ ಇಡಲು ಇದು ತುಂಬಾ ಸಹಕಾರಿ.

3,ಇನ್ನು ಅವರೇಕಾಳನ್ನು ಬಳಸಿದರೆ ಆದ್ದರಿಂದ ಮೆದುಳಿನ ಕ್ರಿಯೆಯೂ ಉತ್ತಮವಾಗುವುದು. ಇದರಲ್ಲಿ ಇರುವಂತಹ ತಾಮ್ರದ ಅಂಶವು ಮಾನಸಿಕ ನಿಶಕ್ತಿ ಕಡಿಮೆ ಮಾಡುವುದು ಮತ್ತು ಏಕಾಗ್ರತೆಯನ್ನು ವೃದ್ಧಿಸುವುದು. ತಾಮ್ರದ ಅಂಶವು ಮನಸ್ಥಿತಿ ಸುಧಾಹರಣೆ ಮಾಡುವುದು.4, ಅವರೆಕಾಳಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಮೆದುಳಿನ ಅಂಗಾಂಶವನ್ನು ಫ್ರೀ ರೇಡಿಕಲ್ ಯಿಂದ ರಕ್ಷಣೆ ಮಾಡುವುದು.5, ಅವರೆಕಾಳಿನಲ್ಲಿ ಇರುವಂತಹ ಪೋಷಕಾಂಶಗಳು ಮೆದುಳಿಗೆ ತುಂಬಾನೆ ಒಳ್ಳೆಯದು. ಇದರಲ್ಲಿರುವ ಮೆಗ್ನೀಷಿಯಂ ಅಂಶವು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದನ್ನು ಸೇವನೆ ಮಾಡಿದರೆ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುವುದು.

6, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಅವರೆಕಾಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಅಂಶವಿದ್ದು ಆರೋಗ್ಯಕ್ಕೆ ಲಾಭಕಾರಿ.7, ಇನ್ನು ಅವರೆಕಾಳಿನಲ್ಲಿ ಕ್ಯಾಲಿಸಿಯಂ ಉತ್ತಮ ಪ್ರಮಾಣದಲ್ಲಿ ಇದೆ. ಇದು ಮೂಳೆಗಳಿಗೆ ತುಂಬಾನೆ ಒಳ್ಳೆಯದು. ಅಷ್ಟೇ ಅಲ್ಲದೆ ಅವರೆಕಾಳು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ವಾಯು ನಾಳವನ್ನು ತೆರೆಯುವುದು. ಇದರಿಂದ ಸರಿಯಾಗಿ ಉಸಿರಾಡಲು ಸಹಕಾರಿಯಾಗುವುದು.8, ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶವು ಇದೆ. ಇದನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಂಡರೆ ಜೀರ್ಣಕ್ರಿಯೆಯೂ ಸುಧಾರಣೆಯಾಗುವುದು ಮತ್ತು ದೇಹದ ತೂಕವನ್ನು ಕಡಿಮೆ ಮಾಡುವುದು.

Leave a Reply

Your email address will not be published. Required fields are marked *