ಪಪ್ಪಾಯ ಹಣ್ಣು ಚಳಿಗಾಲದಲ್ಲಿ ಹೇಗೆ ಬಳಸಿದರೆ ಈ ಕಾಯಿಲೆಗೆ ಮುಕ್ತಿ!!

0 105

ಚಳಿಗಾಲದಲ್ಲಿ ಆಹಾರ ಸೇವನೆ ಸಂದರ್ಭದಲ್ಲಿ ಹೆಚ್ಚು ಗಮನ ಹರಿಸಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು. ಹಲವು ಆರೋಗ್ಯ ಸಮಸ್ಯೆಗಳಿಗೂ ಪಪ್ಪಾಯ ರಾಮಬಾಣ. ಚಳಿಗಾಲದಲ್ಲಿ ಪಪ್ಪಾಯಿ ಹಣ್ಣನ್ನು ತಿಂದರೆ ವಾತ ಕಫದ ಕಾಟ ಇರಲ್ಲ. ಚಳಿಗಾಲದಲ್ಲಿ ಪಪ್ಪಾಯ ಹಣ್ಣು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

1, ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಹಲವು ಅಂಶಗಳನ್ನು ಹೊಂದಿದೆ. ಹೀಗಾಗಿ ಇದನ್ನು ಮಕ್ಕಳಿಂದ ಹಿಡಿದು ವೃದ್ಧರು ಸಹ ಯಾವುದೇ ಹಿಂಜರಿಕೆ ಇಲ್ಲದೆ ತಿನ್ನಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಪಪ್ಪಾಯಿ ಸೇವನೆ ಅತ್ಯುತ್ತಮ ಎನ್ನುತ್ತಾರೆ.2,ಪಪ್ಪಾಯಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಇವೇ. ಪಪ್ಪಾಯಿಯಲ್ಲಿ ಇರುವ ಅಂಶ ವಾತ ಮತ್ತು ಕಫವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸುತ್ತಾದೇ.

3, ಚಳಿಗಾಲದಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪಪ್ಪಾಯಿ ಸೇವನೆಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.4, ಮಧ್ಯಮಗಾತ್ರದ ಪಪ್ಪಾಯಿಯಲ್ಲಿ ನಿಮ್ಮ ದೇಹಕ್ಕೆ ಅಗತ್ಯ ಇರುವ ಶೇಕಡಾ 200ರಷ್ಟು ಹೆಚ್ಚು ವಿಟಮಿನ್ ಸಿ ಲಭ್ಯ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ತುಂಬಾನೇ ಸಹಾಯ ಮಾಡುತ್ತದೆ.

5, ಪ್ರತಿದಿನ ನಾಲ್ಕರಿಂದ ಐದು ತುಂಡು ಪಪ್ಪಾಯಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.6, ಪಪ್ಪಾಯಿಯಲ್ಲಿ ಮೆಗ್ನೀಷಿಯಂ ವಿಟಮಿನ್ ಫೈಬರ್ ಅಂಶ ಅಧಿಕವಾಗಿದೆ. ಪಪ್ಪಾಯಿ ಹಣ್ಣಿನ ಸೇವನೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7, ಪಪ್ಪಾಯಿ ಹಣ್ಣಿನಲ್ಲಿ ಇರುವ ಕ್ಯಾಲ್ಸಿಯಂ ರಂಜಕ ಪೊಟ್ಯಾಶಿಯಂ ಕಬ್ಬಿಣ ಮತ್ತು ವಿಟಮಿನ್ ಸಿ, ವಿಟಮಿನ್ ಇ ಚರ್ಮರೋಗವನ್ನು ಬಗೆಹರಿಸುತ್ತದೆ. ಅಷ್ಟೇ ಅಲ್ಲದೆ ಪಪ್ಪಾಯಿ ಬೀಜ ಮತ್ತು ಎಲೆಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.8, ಪಪ್ಪಾಯಿ ಹಣ್ಣಿನ ಎಲೆಗಳು ಮಲೇರಿಯಾ ವಿರೋಧಿಯಾಗಿ ಕೆಲಸವನ್ನು ಮಾಡುತ್ತವೆ. ಪಪ್ಪಾಯಿ ಎಲೆಗಳ ಸೇವನೆ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಷ್ಟೇ ಅಲ್ಲದೆ ಕಣ್ಣಿನ ಆರೋಗ್ಯಕ್ಕೂ ತುಂಬಾನೆ ಒಳ್ಳೆಯದು.ನಿಯಮಿತವಾಗಿ ಪಪ್ಪಾಯಿ ಹಣ್ಣು ಸೇವನೆ ಮಾಡಿದರೆ ಮೂಳೆಗಳ ಸವೆತ ಕಂಡುಬರುವುದಿಲ್ಲ.

Leave A Reply

Your email address will not be published.