ಮೂರು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ಎಲೆಗಳಂತೆ ಸೇವನೆ ಮಾಡಿ ನೋಡಿ ಸಾಕು!

0 59

ಭಾರತದಲ್ಲಿ ಅದರಲ್ಲಿ ಹಿಂದುಗಳು ತುಳಸಿ ಗಿಡವನ್ನು ತುಂಬಾ ಪವಿತ್ರವೆಂದು ಪೂಜೆ ಮಾಡುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣದಲ್ಲಿ ಹೇಳಿದೆ. ತುಳಸಿ ಗಿಡವನ್ನು ಪುರಾತನ ಕಾಲದಿಂದ ಆಯುರ್ವೇದದಲ್ಲಿ ಔಷಧಿಗಾಗಿ ಬಳಸಲಾಗಿದೆ. ತುಳಸಿ ಎಲೆಯಲ್ಲಿ ತುಂಬಾ ರೀತಿಯ ಔಷಧಿ ಗುಣಗಳು ಇವೆ. ತುಳಸಿ ಗಿಡವನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯಲಾಗಿದೆ. ಧಾರ್ಮಿಕ ಹಾಗೂ ಔಷಧಿಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ.ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ಮತ್ತು ತುಳಸಿ ನೀರಿನಿಂದ ಸಿಗುವ ಆರೋಗ್ಯಕರ ಲಾಭಗಳನ್ನು ತಿಳಿದುಕೊಳ್ಳಿ..

1,ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸುವುದರಿಂದ ದೇಹದ ಒಳಗಿನ ಹಾಗೂ ಹೊರಗಿನ ಅರೋಗ್ಯಕ್ಕೆ ತುಂಬಾ ಲಾಭಗಳು ಸಿಗುತ್ತದೆ. ತುಳಸಿ ಎಲೆಯಲ್ಲಿ ತುಂಬಾ ಆರೋಗ್ಯಕರ ಗುಣಗಳು ಅಡಗಿದೆ.2,ತುಳಸಿ ಎಲೆಯನ್ನು ಹಾಗೆ ಸೇವಿಸುವುದರಿಂದ ತುಳಸಿ ನೀರು ಕುಡಿಯುವುದರಿಂದ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.ತುಳಸಿ ಎಲೆಯಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿರುತ್ತದೆ ಮತ್ತು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ.3,ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಆರೋಗ್ಯ ವ್ಯವಸ್ಥೆ ಆರೋಗ್ಯವಾಗಿರುತ್ತದೆ.4,ಅಷ್ಟೇ ಅಲ್ಲದೆ ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುತ್ತದೆ ಮತ್ತು ದೇಹದಲ್ಲಿ ಆಮ್ಲತೆಯನ್ನು ಸಹ ನಿಯಂತ್ರಣದಲ್ಲಿ ಇಡುತ್ತದೆ.

5,ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ.6,ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸುವುದರಿಂದ ನರದ ವ್ಯವಸ್ಥೆಯನ್ನು ಕಾಪಾಡುತ್ತದೆ ಮತ್ತು ರಕ್ತ ಸಂಚಾರವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.7,ತುಳಸಿ ಸೇವನೆ ಮಾಡಿದರೆ ಅಥವಾ ತುಳಸಿ ನೀರು ಕುಡಿದರೆ ಶೀತವನ್ನು ರಕ್ಷಣೆ ಮಾಡುತ್ತದೆ.8,ಬಾಯಿಯ ದುರ್ವಸನೆಯನ್ನು ಹೋಗಲಾಡಿಸುತ್ತದೆ.

9,ಮದುಮೇಹ ಮತ್ತು ಕಿಡ್ನಿಯಲ್ಲಿ ಇರುವ ಕಲ್ಲಿನ ಸಮಸ್ಸೆಯನ್ನು ಇದು ಹೋಗಲಾಡಿಸುತ್ತದೆ.10,ಹೃದಯವನ್ನು ಕಾಪಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.11,ಶ್ವಾಸಕೋಶದ ಕಾಯಿಲೆಯನ್ನು ತಡೆಯುವ ಶಕ್ತಿ ತುಳಸಿ ಎಲೆಗಳು ಹೊಂದಿರುತ್ತವೆ.ತುಳಸಿ ಜ್ಯೂಸ್, ತುಳಸಿ ಟೀ ಸಹ ಕುಡಿಯಬಹುದು.ಪ್ರತಿದಿನ ಎರಡು ಮೂರು ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹಕ್ಕೆ ತುಂಬಾ ಲಾಭಗಳು ಸಿಗುತ್ತವೆ.

Leave A Reply

Your email address will not be published.