ಈ ವಸ್ತುಗಳನ್ನು ಈಗಲೇ ಮನೆಗೆ ತೆಗೆದುಕೊಂಡು ಬನ್ನಿ! ತಂದು ಇಟ್ಟ ತಕ್ಷಣ ಲಕ್ಷ್ಮೀಕಟಾಕ್ಷ ಆರಂಭ! ಮಧ್ಯ ರಾತ್ರಿಯಿಂದಲೇ ಗುರುಬಲ!

Featured-article

ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಮನೆಯಲ್ಲಿ ಐಶ್ವರ್ಯ,ಅಭಿವೃದ್ದಿ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಮನೆಯಲ್ಲಿ ಸುಖ,ಶಾಂತಿ ನೆಮ್ಮದಿ ಹಾಗೂ ಆಸ್ತಿ ,ಅಂತಸ್ತು ಅಭಿವೃದ್ದಿಯಾಗಬೇಕು ಎಂದು ಆಸೆ ಇರುತ್ತದೆ. ಅಂಥವರು ತಪ್ಪದೆ ಈ ವಸ್ತುಗಳನ್ನು ಮನೆಗೆ ತಂದಿಟ್ಟುಕೊಂಡರೆ ಖಂಡಿತವಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ, ಸಾಲ ಬಾಧೆಯಿಂದ ಮುಕ್ತಿ ಹೊಂದುವಿರಿ ,ಆರೋಗ್ಯದ ಸಮಸ್ಯೆ ಕಾಡುವುದಿಲ್ಲ ಹಾಗೂ ನೆಮ್ಮದಿಯ ಜೀವನವನ್ನು ನಡೆಸುತ್ತೀರಿ.

ಇನ್ನು ನಿಮ್ಮ ಮನೆಯಲ್ಲಿ ಈ ಕೆಲ ವಸ್ತುಗಳು ಇದ್ದರೆ ನೀವೇ ಅದೃಷ್ಟವಂತರು ಒಂದು ವೇಳೆ ಇಲ್ಲವಾದಲ್ಲಿ ತಕ್ಷಣವೇ ಈ ವಸ್ತುಗಳನ್ನು ಖರೀದಿ ಮಾಡಿ ಮನೆಯಲ್ಲಿ ನಿರ್ದಿಷ್ಟವಾದ ಜಾಗದಲ್ಲಿ ಇಟ್ಟುಕೊಳ್ಳಿ ಇದರಿಂದ ಸಕಾರಾತ್ಮಕ ಶಕ್ತಿಯ ಫಲ ಉಂಟಾಗುತ್ತದೆ. ನಮ್ಮ ಹಿಂದಿನ ಕಾಲದಲ್ಲಿ ಮನೆಯಲ್ಲಿ ಚಿನ್ನ ಬೆಳ್ಳಿ ಗಿಂತಲೂ ಮನೆಯಲ್ಲಿ ಸಂತೋಷ ನೆಮ್ಮದಿ ನೆಲೆಸಿರುತ್ತಿತ್ತು. ಅದೇ ರೀತಿ ಗಲಾಟೆ ಜಗಳ ಕಲಹ ಬಹಳ ಕಡಿಮೆ ಇರುತ್ತಿತ್ತು ಏಕೆಂದರೆ ತಾಮ್ರದ ವಸ್ತುಗಳನ್ನು ಮನೆಗಳಲ್ಲಿ ಬಳಸುತ್ತಿದ್ದರು. ಸಾಮಾನ್ಯವಾಗಿ ಅಗತ್ಯಕ್ಕೆ ತಾಮ್ರದ ವಸ್ತುಗಳನ್ನು ಮಾತ್ರ ಬಳಸುತ್ತಿದ್ದರು. ಉದಾಹರಣೆಗೆ ತಟ್ಟೆ,ಲೋಟ, ಚೊಂಬು,ಪಾತ್ರೆ ಇತ್ಯಾದಿ ಅಡುಗೆ ಮನೆಯ ವಸ್ತುಗಳು ತಾಮ್ರದ್ದಾಗಿರುತ್ತಿತ್ತು.

ಇನ್ನೂ ಯಾರ ಮನೆಯಲ್ಲಿ ತಾಮ್ರದ ವಸ್ತುಗಳು ಹೆಚ್ಚಾಗಿರುತ್ತವೆಯೋ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಇರುತ್ತದೆ ಹಾಗೂ ಮನೆಯು ಸಂತೃಪ್ತಿ ಹೊಂದುತ್ತದೆ. ಆರೋಗ್ಯಕರವಾದ ಸಕಾರಾತ್ಮಕ ಬೆಳವಣಿಗೆ ಆಗುತ್ತದೆ. ಮನೆಯಲ್ಲಿ ಜಗಳ ಕಲಹ ಕಡಿಮೆಯಾಗುತ್ತದೆ. ಸೌಂದರ್ಯವೂ ವೃದ್ಧಿಯಾಗುತ್ತದೆ
ಏಕೆಂದರೆ ತಾಮ್ರಕ್ಕೆ ಅಷ್ಟೊಂದು ಶಕ್ತಿಯಿದೆ. ಹಿಂದಿನ ಕಾಲದಲ್ಲಿ ತಾಮ್ರದ ಪಾತ್ರೆಗಳಿಗೆ ನಾಣ್ಯಗಳನ್ನು ಹಾಕಿಡುತ್ತಿದ್ದರು ಏಕೆಂದರೆ ನಾಣ್ಯವು ನೀರಿನಲ್ಲಿರುವ ಕಲ್ಮಶವನ್ನು ತೆಗೆದು ಹಾಕುತ್ತಿತ್ತು.

ಇನ್ನು ತಾಮ್ರದ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಹಾಗೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಇರಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಹಾಗೂ ಬಹುತೇಕ ಆನಾರೋಗ್ಯ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತದೆ. ಹಾಗಾಗಿ ಮನೆಯಲ್ಲಿ ಆದಷ್ಟು ತಾಮ್ರದ ಪಾತ್ರೆಗಳನ್ನು ಹೆಚ್ಚಾಗಿ ಬಳಸಿ. ಲಕ್ಷ್ಮೀ ಕಾರಕ ಹಾಗೂ ಚಂದ್ರ ಆಕರ್ಷಕವಾಗಿರುವ ಬೆಳ್ಳಿ. ಯಾರ ಮನೆಯಲ್ಲಿ ಬೆಳ್ಳಿ ಹೆಚ್ಚಾಗಿರುತ್ತದೆಯೋ ಅವರಿಗೆ ಧನಾತ್ಮಕ ಶಕ್ತಿಗಳು ವೃದ್ಧಿಯಾಗುತ್ತದೆ, ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗೂ ಶತ್ರುಗಳ ಬಾಧೆ ಕಾಡುವುದಿಲ್ಲ.

ಈ 2 ಪ್ರಮುಖವಾದ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತದೆ. ನಿಮ್ಮ ಮನೆಯಲ್ಲಿ ಬೆಳ್ಳಿನಾಣ್ಯಗಳ ಜೊತೆಗೆ ಲಕ್ಷ್ಮಿ ಅಥವಾ ಗಣೇಶನ ಬೆಳ್ಳಿ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜೆಯನ್ನು ಮಾಡುವುದರಿಂದ ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುತ್ತದೆ ಹಾಗೂ ಸಂಬಂಧಿಕರಿಂದ ವಿರೋಧ ಇರುವುದಿಲ್ಲದಂತಾಗುತ್ತದೆ. ತಾಮ್ರದಿಂದ ಮನೆಯ ಅಭಿವೃದ್ಧಿಯಾಗುತ್ತದೆ, ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ, ಸೌಂದರ್ಯ ವೃದ್ಧಿಯಾಗುತ್ತದೆ, ಹಾಗೂ ಮನೆಯಲ್ಲಿ , ಮನಸ್ಸಿನಲ್ಲಿ ನೆಮ್ಮದಿ ನೆಲೆಸುತ್ತದೆ.

ಬೆಳ್ಳಿಯಿಂದ ಹಿತಶತ್ರುಗಳ ಕಾಟ ಬಾಧೆ ಇಲ್ಲದಂತಾಗುತ್ತದೆ. ಯಾವುದೇ ರೀತಿಯ ಗಂಡಾಂತರಗಳು ನಿಮಗೆ ಆಗುವುದಿಲ್ಲ, ಲಕ್ಷ್ಮಿಯ ಅನುಗ್ರಹ ಸಿಗುತ್ತದೆ ಹಾಗೂ ಮುಖ್ಯವಾಗಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಧನ್ಯವಾದಗಳು.

Leave a Reply

Your email address will not be published. Required fields are marked *