ಯಾವ ಸಮಯದಲ್ಲಿ ತುಳಸಿ ಗಿಡ ಮುಟ್ಟಿದರೆ ಸಂಕಷ್ಟ ಬರುತ್ತದೆ!

ಪುಟ್ಟ ಸಸ್ಯವಾದ ತುಳಸಿಯನ್ನು ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಿ, ಪೂಜಿಸಲಾಗುತ್ತದೆ. ಜಗತ್ ಪಾಲಕನಾದ ಭಗವಾನ್ ವಿಷ್ಣುವಿಗೆ ತುಳಸಿ ಅತ್ಯಂತ ಶ್ರೇಷ್ಠವಾದದ್ದು. ಯಾರು ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜಿಸುತ್ತಾರೋ, ತುಳಸಿಯನ್ನು ನಿತ್ಯವೂ ಪೂಜಿಸುತ್ತಾರೋ ಆ ಮನೆಯಲ್ಲಿ ದೇವರು ನೆಲೆಸುತ್ತಾರೆ ಎಂಬ ನಂಬಿಕೆ ಇದೆ.

ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಆಗಮಿಸುತ್ತಾರೆ. ದುಷ್ಟ ಶಕ್ತಿಗಳು ಮನೆಯಿಂದ ದೂರ ನಿಲ್ಲುತ್ತವೆ. ಮನೆಯಲ್ಲಿ ಇರುವ ವ್ಯಕ್ತಿಗಳು ಉತ್ತಮ ಆರೋಗ್ಯದಿಂದ ಸಕಲ ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಅಂತೆಯೇ ತುಳಸಿ ಗಿಡವನ್ನು ಗೌರವಿಸದೇ ಇರುವುದು, ಮನೆಯಲ್ಲಿ ತುಳಸಿಯ ಗಿಡವನ್ನು ನೆಟ್ಟು, ಅದಕ್ಕೆ ಸರಿಯಾಗಿ ನೀರು ಮತ್ತು ಮಣ್ಣನ್ನು ನೀಡದೆ ಇರುವುದು ಅತ್ಯಂತ ಪಾಪಕೃತ್ಯ ಎಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡಕ್ಕೆ ಅವಮಾನ ಮಾಡುವುದು ಅಥವಾ ಅನುಪಯುಕ್ತ ಕೆಲಸಗಳಿಗೆ ತುಳಸಿಯನ್ನು ಬಳಸಿಕೊಳ್ಳುವುದು ಮಾಡಿದರೆ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುವುದು. ಹಿಂದೂ ಧರ್ಮ ಹಾಗೂ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಪವಿತ್ರ ತುಳಸಿ ಎಲೆಯೊಂದಿಗೆ ಕೆಲವು ಅಸಂಬದ್ಧ ಕೆಲಸವನ್ನು ಮಾಡಬಾರದು. ಅವು ನಿಮಗೆ ತೊಂದರೆಯನ್ನುಂಟು ಮಾಡುತ್ತವೆ. ಹಾಗಾದರೆ ಆ ಪಾಪ ಕೃತ್ಯಗಳು ಯಾವುವು? ಎನ್ನುವುದನ್ನು ತಿಳಿಯೋಣ ಬನ್ನಿ

ಹಿಂದೂ ಸಂಸ್ಕೃತಿಯಲ್ಲಿ ತುಳಸಿ–ಹಿಂದೂ ದೇವಾಲಯಗಳ ಸುತ್ತ, ಮನೆಯ ಮುಂಭಾಗದಲ್ಲಿ ತುಳಸಿ ಗಿಡಗಳು ಇರುವುದನ್ನು ಕಾಣಬಹುದು. ಇದು ಪುಟ್ಟ ಸಸ್ಯವಾದರೂ ಇದರ ಎಲೆಗಳು ಅಥವಾ ದಳಗಳು ಭಗವಾನ್ ವಿಷ್ಣುವಿಗೆ ಅತ್ಯಂತ ಶ್ರೇಷ್ಠವಾದದ್ದು. ಹಾಗಾಗಿ ದೇವತೆಗಳ ಆರಾಧನೆಯ ಸಂದರ್ಭದಲ್ಲಿ ತುಳಸಿ ಎಲೆಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ಧಾರ್ಮಿಕವಾಗಿ ಪವಿತ್ರ ಸ್ಥಾನವನ್ನು ಪಡೆದುಕೊಂಡಂತೆಯೇ ವೈಜ್ಞಾನಿಕ ವಾಗಿಯು ಅತ್ಯುತ್ತಮ ಗಿಡಮೂಲಿಕೆಯ ಸಸ್ಯ. ತುಳಸಿ ರಸದಿಂದ ಸಾಕಷ್ಟು ಅನಾರೋಗ್ಯಗಳನ್ನು ಸುಲಭವಾಗಿ ನಿವಾರಿಸಬಹುದಾಗಿದೆ.

ತುಳಸಿ ಪುರಾಣ–ಪುರಾಣದ ಪ್ರಕಾರ, ಜಲಂಧರ ಎನ್ನುವ ರಾಕ್ಷಸನ ಪತ್ನಿ ವೃಂದ. ಪತಿವೃತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ಜಲಂಧರನ ಉಪಟಳವನ್ನು ತಾಳಲಾರದೆ ಜನರೆಲ್ಲರೂ ಶಿವ ಮತ್ತು ವಿಷ್ಣುವನ್ನು ಪ್ರಾರ್ಥನೆಯ ಮೂಲಕ ತಮ್ಮನ್ನು ಕಾಪಾಡುವಂತೆ ಕೇಳಿಕೊಂಡರು. ಆಗ ಶಿವ ಮತ್ತು ವಿಷ್ಣು ಜಲಂಧರನನ್ನು ಸೋಲಿಸಲು ಬಂದರು. ವಿಷ್ಣು ಜಲಂಧರನ ರೂಪವನ್ನು ತಾಳಿ ವೃಂದಾಳ ಪಾತಿವ್ರತ್ಯವನ್ನು ಭಂಗಗೊಳಿಸಿದನು. ಶಿವನು ಜಲಂಧರನನ್ನು ಸಾಯಿಸಿದನು. ತುಳಸಿಯ ಅವತಾರವಾದ ವೃಂದ ಶಿವನನ್ನು ಪೂಜಿಸುವಾಗ ತನ್ನ ಎಲೆಯನ್ನು ಬಳಸಬಾರದು ಎಂದು ಶಾಪ ನೀಡಿದಳು. ವಿಷ್ಣುವಿನ ಆಶೀರ್ವಾದ ಪಡೆದ ವೃಂದ ಜಲಂಧರನ ಭಸ್ಮದಲ್ಲಿ ತಾನೂ ಸಹ ಬೂದಿಯಾದಳು.

ಪಾರ್ವತಿಯ ವೃಂದಾವನದಲ್ಲಿ ಹುಟ್ಟಿದ ತುಳಸಿ—ಜಲಂಧರನ ಭಸ್ಮದೊಂದಿಗೆ ಆಹುತಿಯಾದ ವೃಂದಾ ನಂತರ ತರ ಪಾವರ್ತತಿ ದೇವಿ ನಿರ್ಮಿಸಿದ ಬೃಂದಾವನದಲ್ಲಿ ತುಳಸಿಯ ರೂಪದಲ್ಲಿ ಹುಟ್ಟಿ ಬಂದಳು. ಇನ್ನೊಂದು ಕಥೆಯ ಪ್ರಕಾರ ವೃಂದಾ ರುಕ್ಮಿಣಿಯಾಗಿ ಹುಟ್ಟಿ ಬಂದಳು ಎಂದೂ ಹೇಳಲಾಗುತ್ತದೆ. ನಂತರ ಕಾರ್ತಿಕ ಮಾಸದ ದ್ವಾದಶಿಯಂದು ಕೃಷ್ಣನನ್ನು ವಿವಾಹವಾದಳು ಎನ್ನುವ ಕಥೆ ಇರುವುದನ್ನು ಸಹ ತಿಳಿಯಬಹುದು. ಈ ಹಿನ್ನೆಲೆಯಲ್ಲಿಯೇ ವಿಷ್ಣು ದೇವರಿಗೆ ತುಳಸಿ ಎಂದರೆ ಅತ್ಯಂತ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ.

ತುಳಸಿಯನ್ನು ಎಂದಿಗೂ ಅಗಿಯಬಾರದು–ತುಳಸಿ ಎಲೆಯು ಆರೋಗ್ಯಕರ ಗುಣಗಳಿಂದ ಕೂಡಿದೆ ಎಂದು ಬಹುತೇಕ ಜನರು ನಿತ್ಯ ತುಳಸಿ ಎಲೆಯನ್ನು ಅಗೆಯುವ ಪದ್ಧತಿಯನ್ನು ಹೊಂದಿರುತ್ತಾರೆ. ಆದರೆ ಹೀಗೆ ಮಾಡುವುದು ಉತ್ತಮವಾದದ್ದಲ್ಲ. ತುಳಸಿ ಎಲೆಯಲ್ಲಿ ಕೆಲವು ವಿಷಕಾರಿ ಲೋಳೆಗಳು ಇರುತ್ತವೆ. ಅವುಗಳನ್ನು ಹಲ್ಲಿನಲ್ಲಿ ಜಗೆದಾಗ ನಮ್ಮ ಬಾಯಿಯಲ್ಲಿರುವ ಲೋಳೆಯೊಂದಿಗೆ ಸೇರಿಕೊಂಡು. ದವಡೆಗಳಿಗೆ ಹಾನಿ ಉಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು.

ಶಿವಲಿಂಗಕ್ಕೆ ಅರ್ಪಿಸಬಾರದು–ಹಿಂದೂ ಕಥೆ ಪುರಾಣಗಳ ಪ್ರಕಾರ ವಿಷ್ಣುವು ತುಳಸಿಯ ಪತಿ. ಹಾಗಾಗಿ ವಿಷ್ಣುವಿನ ಅವತಾರಗಳಾದ ಶ್ರೀ ಕೃಷ್ಣ, ರಾಮ, ವಿಷ್ಣುವಿಗೆ ಮಾತ್ರ ತುಳಸಿ ಎಲೆಯನ್ನು ಅರ್ಪಿಸುತ್ತಾರೆ. ಶಿವನು ಸರಳ ಹಾಗೂ ಶಕ್ತಿಗೆ ಹೆಸರಾದವನು. ಹಾಗಾಗಿ ಶಿವನ ಪೂಜೆ ಅಥವಾ ಶಿವಲಿಂಗದ ಪೂಜೆಗೆ ತುಳಸಿ ಎಲೆ ಹಾಗೂ ದಳವನ್ನು ಎಂದಿಗೂ ಬಳಸಬಾರದು.

ಈ ವಿಶೇಷ ದಿನಗಳಲ್ಲಿ ತುಳಸಿಯನ್ನು ಕತ್ತರಿಸಬಾರದು
ಹಿಂದೂ ಪಂಚಾಂಗದ ಪ್ರಕಾರ ಏಕಾದಶಿ, ಭಾನುವಾರ, ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು, ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನು ಮಾಡಬಾರದು. ಅದು ಅತ್ಯಂತ ಪಾಪಕೃತ್ಯ. ಅದರಿಂದ ಶಾಪ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.

ದುರಾದೃಷ್ಟಕ್ಕೆ ಆಹ್ವಾನ–ವಿಶೇಷ ದಿನಗಳಲ್ಲಿ ತುಳಸಿ ಎಲೆಯನ್ನು ಕೀಳುವುದು ಪರಿಶುದ್ಧತೆಯನ್ನು ಮುರಿದಂತಾಗುವುದು. ತುಳಸಿಯನ್ನು ನಾಶ ಮಾಡಿದರೆ ಜೀವನದಲ್ಲಿ ಶಾಪವನ್ನು ಪಡೆಯುವುದಲ್ಲದೆ ಶೀಘ್ರದಲ್ಲಿಯೇ ಅಪಘಾತ ಅಥವಾ ಸಾವನ್ನು ಎದುರಿಸಬೇಕಾಗುತ್ತದೆ.

ತುಳಸಿಗೆ ಅಗೌರವ ತೋರಬಾರದು–ತುಳಸಿ ಗಿಡವು ಸ್ವರ್ಗ ಮತ್ತು ಭೂಮಿಯ ನಡುವಿನ ಮಿತಿ ಎಂದು ನಂಬಲಾಗಿದೆ. ಹಾಗಾಗಿಯೇ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು, ಧಾರ್ಮಿಕ ಹಿನ್ನೆಲೆಯಲ್ಲಿಯೇ ಪೂಜೆ, ಪುನಸ್ಕಾರವನ್ನು ಕೈಗೊಳ್ಳಲಾಗುವುದು. ಈ ಗಿಡವನ್ನು ನೆಟ್ಟು ಅಗೌರವ ಹಾಗೂ ನಿಷ್ಕಾಳಜಿಯನ್ನು ತೋರಬಾರದು. ಅದು ತುಳಸಿಗೆ ಅಗೌರವ ತೋರಿದಂತೆ.

ಗಣೇಶನನ್ನು ಬಯಸಿದ್ದ ತುಳಸಿ–ಕೆಲವು ಪುರಾಣ ಕಥೆಯ ಪ್ರಕಾರ ತುಳಸಿಯು ಒಮ್ಮೆ ಕಾಡಿನಲ್ಲಿ ಸುತ್ತಾಡುತ್ತಿರುವಾಗ ಬ್ರಹ್ಮಚರ್ಯದಿಂದ ಇದ್ದ ಗಣೇಶನನ್ನು ನೋಡಿದಳು. ಅವನಿಗೆ ಮನಸೋತಳು. ನಂತರ ಧ್ಯಾನ ಮಾಡುವ ಮೂಲಕ ಗಣೇಶನಿಗೆ ತನ್ನನ್ನು ತಾನೇ ಅರ್ಪಿಸಿಕೊಳ್ಳಲು ಸಿದ್ಧಳಾದಳು. ಇದನ್ನು ತಿಳಿದ ಗಣೇಶನು ತುಳಸಿಯಿಂದ ನಯವಾಗಿ ದೂರ ಸರಿಯಲು ಪ್ರಯತ್ನಿಸಿದನು.

ತುಳಸಿಯ ವಿವಾಹ ಪ್ರಸ್ತಾಪಕ್ಕೆ ಪ್ರತುತ್ತರವಾಗಿ ಗಣೇಶನು”ನಾನು ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ತೊಟ್ಟಿದ್ದೇನೆ ಎಂದನು.” ಅದು ತುಳಸಿಗೆ ಕೋಪ ತರಿಸುವಂತೆ ಮಾಡಿತು. ಆಗ ತುಳಸಿ ಬೇಸರದಿಂದ ನೀನು ಒಂದು ದಿನ ನಿಜವಾಗಿಯೂ ಬ್ರಹ್ಮಚರ್ಯವನ್ನು ತೊರೆದು ನನ್ನನ್ನು ವಿವಾಹ ವಾಗುವೆ ಎಂದು ಹೇಳಿದಳು.
ತುಳಸಿಯ ಮಾತನ್ನು ಕೇಳಿದ ಗಣೇಶನು ಕೋಪಗೊಂಡನು. ನಂತರ ನೀನು ಶೀಘ್ರದಲ್ಲಿಯೇ ರಾಕ್ಷಸನನ್ನು ವಿವಾಹವಾಗುವೆ ಎಂದು ಶಾಪ ನೀಡಿದನು. ಇದನ್ನು ಕೇಳಿದ ತುಳಸಿಗೆ ತನ್ನ ತಪ್ಪಿನ ಅರಿವಾಯಿತು. ತಕ್ಷಣವೇ ಗಣೇಶನಲ್ಲಿ ಕ್ಷಮೆಯನ್ನು ಕೇಳಿದಳು.

ತುಳಸಿ ಕ್ಷಮೆ ಯಾಚಿಸಿದ್ದಕ್ಕೆ ಗಣೇಶ ಸಂತೋಷ ಪಟ್ಟನು. ಅದರೊಂದಿಗೆ ನೀನು ಮುಂದಿನ ದಿನದಲ್ಲಿ ಭಗವಂತನಿಂದ ದೈವ ಶಕ್ತಿ ಇರುವ ಸಸ್ಯವಾಗಿ ಪರಿವರ್ತನೆಗೊಳ್ಳುವೆ. ಎಲ್ಲಾ ಪೂಜಾ ಕಾರ್ಯಗಳಿಗೂ ನಿನ್ನ ಎಲೆಯನ್ನು ಬಳಸುವರು. ಆದರೆ ನನ್ನ ಯಾವ ಆರಾಧನೆಗೂ ನಿನ್ನನ್ನು ಬಳಸಬಾರದು ಎಂದು ಅನುಗ್ರಹಿಸಿದನು.

ಈ ಹಿನ್ನೆಲೆಯ ಕಥೆಯಿಂದಾಗಿಯೇ ತುಳಸಿ ಎಲೆಯನ್ನು ಗಣೇಶನ ಪೂಜೆಗೆ ಬಳಸುವುದಿಲ್ಲ. ಹಾಗೊಮ್ಮೆ ಬಳಸಿದರೆ ಆ ಪೂಜೆಯು ಯಾವುದೇ ರೀತಿಯ ಫಲಪ್ರದದಾಯಕವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ.

ತುಳಸಿ ಗಿಡವನ್ನು ಮನೆಯೊಳಗೆ ಇಡಬಾರದು

ತನ್ನ ಗಂಡನ ಮರಣದ ನಂತರ ತುಳಸಿ ವಿಷ್ಣುವನ್ನು ಪ್ರೀತಿಸತೊಡಗಿದಳು. ಸದಾ ಕಾಲ ರಾಧಾಳ ರೀತಿಯಲ್ಲಿಯೇ ಅವನ ಸಖೀಯಾಗಿ ಉಳಿಯುತ್ತೇನೆ ಎಂದು ಭರವಸೆ ನೀಡಿದಳು. ಇದನ್ನು ವಿಷ್ಣು ಸಹ ಒಪ್ಪಿಕೊಂಡನು. ಹಾಗೆಯೇ ತುಳಸಿಯನ್ನು ಪ್ರೀತಿಯಿಂದ ಕಂಡನು.ತುಳಸಿ ವಿಷ್ಣುವಿನಲ್ಲಿ ತನ್ನನ್ನು ನಿನ್ನ ಮನೆಗೆ ಕರೆದೊಯ್ಯುವಂತೆ ಕೋರಿಕೊಂಡಳು. ಆಗ ವಿಷ್ಣು ನಿರಾಕರಿಸಿದನು. ಆಗ ತುಳಸಿ ಏಕೆಂದು ಪ್ರಶ್ನಿಸಿದಳು. ಆಗ ವಿಷ್ಣು, ನನ್ನ ಮನೆ ಲಕ್ಷ್ಮಿ ದೇವಿಗೆ ಸೇರಿದ್ದು, ಆದರೆ ನನ್ನ ಹೃದಯ ನಿಮ್ಮೆಲ್ಲರಿಗೂ ಸೇರಿದೆ ಎಂದು ಸಾಂತ್ವನ ಮಾಡಿದನು.ನಂತರ ತುಳಸಿ ಮನೆಯ ಹೊರಗೆ ಒಂದು ಜಾಗವನ್ನು ಅನುಮತಿಸುವಂತೆ ಕೇಳಿಕೊಂಡಳು. ಅದಕ್ಕೆ ವಿಷ್ಣು ಒಪ್ಪಿಗೆಯನ್ನು ನೀಡಿದನು. ಅಂದಿನಿಂದ ತುಳಸಿ ಗಿಡವನ್ನು ಪ್ರತಿ ಮನೆಯ ಹೊರಗೆ ಹಾಗೂ ದೇವಾಲಯದ ಹೊರ ಭಾಗದಲ್ಲಿ ನೆಡಲಾಯಿತು. ನಂತರ ತುಳಸಿ ದೇವಿಗೆ ವಿಶೇಷ ಪೂಜೆ ಹಾಗೂ ಹಬ್ಬದ ಆಚರಣೆಯನ್ನು ಸಹ ಮಾಡಲಾಯಿತು ಎನ್ನುವ ಪ್ರತೀತಿ ಇದೆ.

Related Post

Leave a Comment