SBI ಬ್ಯಾಂಕಿನ ಎಲ್ಲಾ ಗ್ರಾಹಕರ ಗಮನಕ್ಕೆ 2022 ಫೆಬ್ರವರಿ 1 ರಿಂದ ಹೊಸ ನಿಯಮ ಅಕೌಂಟ್ ಇದ್ದವರು ಈಗಲೇ ಇದನ್ನು ತಪ್ಪದೆ ನೋಡಿ..

ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ವಲಯ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್.ತನ್ನ ಎಲ್ಲಾ ಗ್ರಾಹಕರಿಗೆ ಮುಂದಿನ ಫೆಬ್ರವರಿ 1ರಿಂದ ದೊಡ್ಡ ಬದಲಾವಣೆಗಳನ್ನು ಜಾರಿಗೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರ ಸಂಖ್ಯೆಯನ್ನು ಹೊಂದಿರುವ ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಅನೇಕ ರೀತಿಯ ಹೊಸ ನಿಯಮಗಳನ್ನು ಹಾಗೂ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಕೂಡ ಕಡ್ಡಾಯವಾಗಿ ಇದೆ ಫೆಬ್ರವರಿ 1 ರಿಂದ ಬದಲಾಗುತ್ತಿರುವ ಹೊಸ ನಿಯಮಗಳು ಮತ್ತು ಜಾರಿಗೆ ಬರುತ್ತಿರುವ ಹೊಸ ಬದಲಾವಣೆಗಳನ್ನು ಪ್ರತಿಯೊಬ್ಬ ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಬೇಕು.

SBI ಬ್ಯಾಂಕ್ ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್ ವಹಿವಾಟಿನ ಮಿತಿಯನ್ನು ಹೆಚ್ಚಳ ಮಾಡಿದೆ.ಇದರ ಅದಿಯಲ್ಲಿ SBI ಖಾತೆದಾರರು 2 ಲಕ್ಷ ದಿಂದ 5 ಲಕ್ಷ ರೂಪಾಯಿ ತನಕ ವಹಿವಾಟು ನಡೆಸಬಹುದು ಎಂದು ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸೂಚನೆ ಒರಡಿಸಿದೆ.ಇದಕ್ಕೆ ಯಾವುದೇ ರೀತಿ ಶುಲ್ಕ ಕೂಡ ಇರುವುದಿಲ್ಲ.

5 ಲಕ್ಷ IMPS ವಹಿವಾಟಿಗೆ ಯಾವುದೇ ಶುಲ್ಕ ಇರುವುದಿಲ್ಲ.ಒಂದು ವೇಳೆ ಶಾಖೆ ಮೂಲಕ ಮಾಡಿದರೆ ಈಗ ಇರುವ IMPS ಸೇವಾ ಶುಲ್ಕವು ಅನ್ವಯ ಆಗುತ್ತದೆ ಎಂದು ಜನವರಿ 4 ರಂದು ಪತ್ರಿಕ ಹೇಳಿಕೆಯಲ್ಲಿ ತಿಳಿಸಲಾಗಿದೆ.ಅದರೆ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೊಸ ಸ್ಲಾಬ್ ಸೇರ್ಪಡೆ ಆಗಿದ್ದು ಇದಕ್ಕೆ ಪ್ರಸ್ತಾವಿತಾ ಸೇವಾ ಶುಲ್ಕವಾಗಿ 20+GST ಫೆಬ್ರವರಿ 1 2022 ರಿಂದ ಅನ್ವಯಿಸುತ್ತದೆ.

NEFT ಮತ್ತು RTGC ಮೇಲಿನ ಸೇವಾ ಶುಲ್ಕದಂತೆಯೇ IMPS ಮೇಲೆ ಸೇವಾ ಶುಲ್ಕ ಇದೆ ಎಂದು ಬ್ಯಾಂಕ್ ತಿಳಿಸಿದೆ.ಈ ಹೊಸ ಬದಲಾವಣೆಯು ಈ ವರ್ಷದ ಫೆಬ್ರವರಿ 1 ರಿಂದ ಅನ್ವಯ ಆಗುತ್ತದೆ. SBI ನಲ್ಲಿ IMPS, NEFT, RTGC ವಹಿವಾಟುಗಳಿಗೆ ಹೊಸ ನಿಯಮ.IMPS ಶುಲ್ಕ ಆನ್ಲೈನ್ ವಿಧಾನ. ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಗ್ ಮೂಲಕ ವಹಿವಾಟು ನಡೆಸಿದ್ದಾಲ್ಲಿ IMPS ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ GST ಇರುವುದಿಲ್ಲ.

IMPS ಶುಲ್ಕಗಲು ಅಫ್ಲಿನ್ ವಿಧಾನ 1000 ರೂಪಾಯಿ ತನಕ ಯಾವುದೇ ಶುಲ್ಕ ಇರುವುದಿಲ್ಲ.1000 ಮೇಲ್ಪಟ್ಟ ರೂಪಾಯಿ 10 ಸಾವಿರ ತನಕ ಸೇವಾ ಶುಲ್ಕ 2 ರೂಪಾಯಿ ಮತ್ತು GST.10000 ಮೇಲ್ಪಟ್ಟು 1 ಲಕ್ಷ ತನಕ ಸೇವಾ ಶುಲ್ಕ 4 ರೂಪಾಯಿ ಮತ್ತು GST.ಇನ್ನು 1 ಲಕ್ಷ ದಿಂದ 2 ಲಕ್ಷ ತನಕ ರೂಪಾಯಿ 12 ಸೇವಾ ಶುಲ್ಕ ಮತ್ತು GST. ಇನ್ನು 2 ಲಕ್ಷ ದಿಂದ 5 ಲಕ್ಷ ತನಕ ರೂಪಾಯಿ 20 ಸೇವಾ ಶುಲ್ಕ ಮತ್ತು GST.

NEFT ಸೇವಾ ಶುಲ್ಕಗಳು ಆನ್ಲೈನ್ ವಿಧಾನ..ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಯೋನೋ ಆಪ್ ಸೇರಿದಂತೆ NEFT ವಹಿವಾಟುಗಳಿಗೆ ಯಾವುದೇ GST ಅಥವಾ ಸೇವಾ ಶುಲ್ಕ ಇಲ್ಲಾ.2 ಲಕ್ಷ ಮೇಲ್ಪಟ್ಟ ಮೊತ್ತಕ್ಕೂ ಇದು ಅನ್ವಯಿಸುತ್ತದೆ.NEFT ಸೇವಾ ಶುಲ್ಕಗಳು ಆಫ್ಲೈನ್ ವಿಧಾನ..ಹತ್ತು ಸಾವಿರ ರೂಪಾಯಿಗೆ ಸೇವಾ ಶುಲ್ಕ 2 ಮತ್ತು GST.2 ಲಕ್ಷ ಮೇಲ್ಪಟ್ಟ ರೂಪಾಯಿಗೆ 4 ಸೇವಾ ಶುಲ್ಕ ಮತ್ತು GST.

RTGC ಸೇವಾ ಶುಲ್ಕಗಳು ಆನ್ಲೈನ್ ವಿಧಾನ..ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಯೋನೋ ಆಪ್ ಸೇರಿದಂತೆ RTGC ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ.ಇನ್ನು ಆಫ್ಲೈನ್ ವಿಧಾನದಲ್ಲಿ 2 ಲಕ್ಷ ಮೇಲೆ ಸೇವಾ ಶುಲ್ಕ 20 ರೂಪಾಯಿ ಮತ್ತು GST.5 ಲಕ್ಷ ಮೇಲ್ಪಟ್ಟರೆ ಸೇವಾ ಶುಲ್ಕ 40 ರೂಪಾಯಿ ಮತ್ತು GST.

Related Post

Leave a Comment