ಕೇವಲ 1 ಲೋಟ ರಾಗಿ ಹಾಲು ಹೀಗೆ ಮಾಡಿ ಕೂಡಿದ್ರೆ ಅರೋಗ್ಯ ದುಪ್ಪಟ್ಟಾಗತ್ತೆ ಖಂಡಿತ!

ಭಾರತದ ಹಲವು ಭಾಗಗಳಲ್ಲಿ ರಾಗಿಯನ್ನು ಬಳಸಲಾಗುತ್ತದೆ. ರಾಗಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.  ರಾಗಿಯನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ರಾತ್ರಿ ಮಲಗುವ ಮುನ್ನ ರಾಗಿಯೊಂದಿಗೆ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ.

ರಾಗಿಯಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದು ಥಯಾಮಿನ್, ರಿಬೋಫ್ಲಾವಿನ್, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಕಬ್ಬಿಣವನ್ನು ಹೊಂದಿದ್ದು ಅದು ನಿಮ್ಮ ದಿನದ ಉತ್ತಮ ಆರಂಭಕ್ಕೆ ಪ್ರಯೋಜನಕಾರಿ ಆಗಿದೆ. 

ರಾಗಿ  ಒಂದು ರೀತಿಯ ಸೂಪರ್‌ಫುಡ್ ಆಗಿದ್ದು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ರಾಗಿ ಸೇವೆನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಕೂಡ ಹೇಳಲಾಗುತ್ತದೆ. ಇದಲ್ಲದೆ ಮಲಗುವ ಮುನ್ನ ಹಾಲಿನೊಂದಿಗೆ ರಾಗಿ ಹಿಟ್ಟನ್ನು ಬೆರೆಸಿ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ರಾತ್ರಿ ಹಾಲಿನೊಂದಿಗೆ ರಾಗಿ ಸೇವಿಸುವುದರಿಂದ ಆಗುವ ಪ್ರಯೋಜನಗಳು: 
ರಾತ್ರಿ ಹಾಲಿನಲ್ಲಿ ರಾಗಿ ಬೆರೆಸಿ ಕುಡಿಯುವುದರಿಂದ ಮನಸ್ಸು ಚುರುಕಾಗುತ್ತದೆ ಮತ್ತು ನಿದ್ರೆಯೂ ಸುಧಾರಿಸುತ್ತದೆ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುವುದರೊಂದಿಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ರಾಗಿಯಲ್ಲಿ ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳಿದ್ದು ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೀರ್ಘಕಾಲದವೆರೆಗೆ ನಿಮ್ಮ ಹಸಿವನ್ನು ನೀಗಿಸುವಲ್ಲಿ ಇದು ಒಂದು ಕಾರಣವಾಗಿದೆ. 

ರಾಗಿ ಮತ್ತು ಹಾಲು ಎರಡರಲ್ಲೂ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಇದ್ದು ಇವು ನರಗಳಿಗೆ ಪ್ರಯೋಜನಕಾರಿಯಾಗಿವೆ. ಹಾಲಿನಲ್ಲಿ ಟ್ರಿಪ್ಟೋಫಾನ್ ಇದದ್ದು ಅದು ಸಿರೊಟೋನಿನ್ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಹಾಲಿನೊಂದಿಗೆ ರಾಗಿ ಹಿಟ್ಟನ್ನು ಬೆರೆಸಿದಾಗ ಅದು ಒತ್ತಡ, ಮನಸ್ಥಿತಿ ಬದಲಾವಣೆಳನ್ನು ನಿರ್ವಹಿಸುತ್ತದೆ. ಆದರೆ, ನೆನಪಿಡಿ ರಾತ್ರಿ ಮಲಗುವ ಎರಡು ಗಂಟೆ ಮೊದಲು ಒಂದು ಲೋಟ ಹಾಲಿಗೆ ಸ್ವಲ್ಪವೇ ಸ್ವಲ್ಪ ರಾಗಿಯನ್ನು ಬೆರೆಸಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.

ರಾಗಿ ಹಾಲನ್ನು ತಯಾರಿಸುವುದು ಹೇಗೆ?
ರಾಗಿ ಹಾಲನ್ನು ತಯಾರಿಸಲು ಮಾದಲು ಒಂದು ಬೌಲ್ ತೆಗೆದುಕೊಂಡು 2 ಟೀ ಚಮಚ ರಾಗಿ ಹಿಟ್ಟಿಗೆ 1 1/2 ಕಪ್ ನೀರು ಮತ್ತು ಒಂದು ಅರ್ಧ ಕಪ್ ನಷ್ಟು ಹಾಲನ್ನು ಬೆರೆಸಿ. 20 ನಿಮಿಷಗಳ ನಂತರ ಒಂದು ಪ್ಯಾನ್ ತೆಗೆದುಕೊಂಡು ಈ ಮಿಶ್ರಣವನ್ನು ಸುರಿಯಿರಿ. ಬಳಿಕ ಈ ಮಿಶ್ರಣವನ್ನು ಕುಡಿಯಲು ಬಿಡಿ. ಅದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ.

Related Post

Leave a Comment