ನರಕಕ್ಕೆ ಒಂದು ಹೆಜ್ಜೆ ಮುಂದೆ!ಸಕ್ಕರೆ ಮೈದಾ ಉಪ್ಪು ಬಿಳಿ ವಿಷಗಳು!

Sugar maida salt white poisons! ಮನುಷ್ಯ ತನ್ನ ಜೀವಿತಾವಧಿಯಲ್ಲಿ ಆಹಾರಕ್ಕಿಂತ ಹೆಚ್ಚಾಗಿ ಚಿಕಿತ್ಸೆಗೆ ಹೆಚ್ಚು ಹಣ ವ್ಯಯಿಸುತ್ತಿದ್ದಾನೆ. ಈ ವೆಚ್ಚವನ್ನು ತಗ್ಗಿಸುವಲ್ಲಿ ಯೋಗ ಹಾಗೂ ಸ್ವಚ್ಛತೆ ಸಂಜೀವಿನಿಯಾಗಿದೆ ಎಂದು ಯೋಗಪಟು ವಸಂತ ಹೊಸಮನಿ ಹೇಳಿದರು.ದೈನಂದಿನ ಆಹಾರದಲ್ಲಿ ಸಕ್ಕರೆ, ಉಪ್ಪು, ಮೈದಾ ಇವುಗಳಿಂದ ದೂರವಿದ್ದರೆ ಅನಾರೋಗ್ಯದಿಂದ ಪಾರಾಗಬಹುದೆಂದು ತಿಳಿಸಿದರು.

ಯೋಗಪಟು ಸಂಬಾಜಿ ನಿಂಬಾಳಕರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ಜೀವನ ಶೈಲಿ ತುಂಬಾ ಜಟಿಲವಾಗಿದ್ದು, ಅನಾರೋಗ್ಯ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಮನುಷ್ಯ ದುಡ್ಡಿನ ಸಂಪಾದನೆಗೆ ಕೊಡುತ್ತಿರುವ ಮಹತ್ವ ಹಾಗೂ ಅಳವಡಿಸಿಕೊಂಡಿರುವ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಮಾನವರ ಆರೋಗ್ಯದಲ್ಲಿನ ಸಮತೋಲನ ಹಾಳಾಗುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ಯೋಗ, ಧ್ಯಾನದ ಮಹತ್ವವನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ದಿನವೂ ಚಹಾ ಕುಡಿಯಲು ಸಕ್ಕರೆ ಬಳಕೆ ಮಾಡ್ತಾರೆ. ನಿಂಬೆ ಪಾನಕ ಹಾಗೂ ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ಸಕ್ಕರೆ ಬಳಸುತ್ತಾರೆ. ಇನ್ನು ಅಡುಗೆಗೆ ಬಿಳಿ ಉಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ಇದೆಲ್ಲವೂ ಎಷ್ಟು ಪ್ರಮಾಣದಲ್ಲಿದ್ದರೆ ಆರೋಗ್ಯಕರ ಎಂಬುದನ್ನು ತಿಳಿಯುವುದು ಮುಖ್ಯ. ಯಾಕಂದ್ರೆ ಊಟದ ರುಚಿ ಹೆಚ್ಚಿಸುವ ಈ ಪದಾರ್ಥಗಳೇ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಪ್ರತಿನಿತ್ಯ ನಾವು ಅಡುಗೆ ಮಾಡಲು ಉಪ್ಪು , ಸಕ್ಕರೆ ಹಾಗೂ ಮೈದಾ ಬಳಸುತ್ತೇವೆ. ಮೈದಾವನ್ನು ಹೆಚ್ಚಾಗಿ ಹಬ್ಬದ ದಿನಗಳಲ್ಲಿ ಸಿಹಿ ಪದಾರ್ಥಗಳ ತಯಾರಿಕೆ ಹಾಗೂ ಕುಲ್ಛಾ, ತಂದೂರಿ ರೊಟ್ಟಿ ಸೇರಿದಂತೆ ಹಲವು ಪಾಕ ವಿಧಾನಗಳಲ್ಲಿ ಬಳಕೆ ಮಾಡ್ತಾರೆ. ಹಾಗೆಯೇ ದಿನವೂ ಚಹಾ ಕುಡಿಯಲು ಸಕ್ಕರೆ ಬಳಕೆ ಮಾಡ್ತಾರೆ. ನಿಂಬೆ ಪಾನಕ ಹಾಗೂ ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ಸಕ್ಕರೆ ಬಳಸುತ್ತಾರೆ. ಇನ್ನು ಅಡುಗೆಗೆ ಬಿಳಿ ಉಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ಇದೆಲ್ಲವೂ ಎಷ್ಟು ಪ್ರಮಾಣದಲ್ಲಿದ್ದರೆ ಆರೋಗ್ಯಕರ ಎಂಬುದನ್ನು ತಿಳಿಯುವುದು ಮುಖ್ಯ. ಯಾಕಂದ್ರೆ ಊಟದ ರುಚಿ ಹೆಚ್ಚಿಸುವ ಈ ಪದಾರ್ಥಗಳೇ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಮನೆಯಲ್ಲಿ ತಯಾರಿಸಿದ ಆಹಾರವನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿಯಲಾಗುತ್ತದೆ. ಆದರೆ ದೇಹಕ್ಕೆ ಅನಾರೋಗ್ಯ ಉಂಟು ಮಾಡುವ ಪದಾರ್ಥಗಳು ಅಡುಗೆ ಮನೆಯಲ್ಲೇ ಇವೆ. ಪಾಕವಿಧಾನಗಳಲ್ಲಿ, ಅಡುಗೆಯಲ್ಲಿ ಇವುಗಳ ಅತಿಯಾದ ಬಳಕೆ ಅನಾರೋಗ್ಯ ಉಂಟು ಮಾಡಲು ಕಾರಣವಾಗುತ್ತದೆ.

ಅಡುಗೆಗೆ ರುಚಿ ಹೆಚ್ಚಿಸಲು ಪ್ರತಿದಿನ ಬಳಸುತ್ತಿರುವ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ. ಅಂತಹ ಕೆಲವು ವಸ್ತುಗಳ ಬಗ್ಗೆ ನಾವು ಇಲ್ಲಿ ನೋಡೋಣ. ಅವುಗಳ ಅತಿಯಾದ ಸೇವನೆ ನಿಯಂತ್ರಿಸುವ ಮೂಲಕ ರೋಗಗಳ ಅಪಾಯ ಕಡಿಮೆ ಮಾಡಬಹುದು.

ಚಹಾ ಮತ್ತು ಕಾಫಿ ಹಾಗೂ ಸಕ್ಕರೆ

ಬಿಳಿ ಸಕ್ಕರೆಯನ್ನು ಬಹುತೇಕ ಪ್ರತಿ ಮನೆಗಳಲ್ಲಿ ಬಳಕೆ ಮಾಡ್ತಾರೆ. ಈ ಸಿಹಿಯಾದ ಸಕ್ಕರೆಯನ್ನು ಚಹಾ, ಕಾಫಿ, ಮಿಲ್ಕ್ಶೇಕ್ ಮತ್ತು ಜ್ಯೂಸ್ ಸೇರಿದಂತೆ ಹಲವು ಪದಾರ್ಥಗಳಲ್ಲಿ ಬಳಕೆ ಮಾಡುವ ಮೂಲಕ ಸೇವನೆ ಮಾಡಲಾಗುತ್ತದೆ. ಆದರೆ ಸಕ್ಕರೆ ಆರೋಗ್ಯಕ್ಕೆ ಹಾನಿಕರ.

ವೆಬ್ ಮೆಡ್ ಪ್ರಕಾರ, ಹೆಚ್ಚು ಸಕ್ಕರೆ ಸೇವನೆ ಅಧಿಕ ರಕ್ತದೊತ್ತಡ, ಉರಿಯೂತ, ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಕೊಬ್ಬಿನ ಪಿತ್ತಜನಕಾಂಗ ಕಾಯಿಲೆಗೆ ಕಾರಣ ಆಗುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.

ಸಂಸ್ಕರಿಸಿದ ಪದಾರ್ಥಗಳು

ಸಂಸ್ಕರಿಸಿದ ಪದಾರ್ಥಗಳಲ್ಲಿ ಮೈದಾ ಹಿಟ್ಟು ಪ್ರಮುಖ ಪದಾರ್ಥ ಆಗಿದೆ. ಇದನ್ನು ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಕೆ ಮಾಡ್ತಾರೆ. ಜೊತೆಗೆ ಅಡುಗೆ ಮನೆಯಲ್ಲಿ ಕುಕೀಸ್, ಕೇಕ್, ಬ್ರೆಡ್ ಮತ್ತು ಪಾಸ್ಟಾದಲ್ಲಿ ಹಿಟ್ಟು ಕೂಡ ಇರುತ್ತದೆ. ಮೈದಾವನ್ನು ಅತಿಯಾಗಿ ಸೇವಿಸುವುದು ತೂಕ ಹೆಚ್ಚಾಗುವುದು, ಚಯಾಪಚಯ ಸಮಸ್ಯೆ, ಹೃದ್ರೋಗ ಮತ್ತು ಕ್ಯಾನ್ಸರ್ ಸಮಸ್ಯೆ ಹೆಚ್ಚಿಸುತ್ತದೆ.

ಉಪ್ಪು ಸಾವಿನ ಅಪಾಯ ಹೆಚ್ಚಿಸುತ್ತದೆ

ಹೆಚ್ಚು ಉಪ್ಪು ಸೇವನೆ ಮಾಡುವುದು ಸಾವಿನ ಅಪಾಯವನ್ನು ಶೇಕಡಾ 28 ರಷ್ಟು ಹೆಚ್ಚು ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಉಪ್ಪಿಲ್ಲದ ಆಹಾರದ ರುಚಿ ನಿಮಗೆ ಇಷ್ಟವಾಗದಿದ್ದರೂ ಅದನ್ನು ಮಿತವಾಗಿ ಸೇವಿಸಿ. ಅಧಿಕ ಉಪ್ಪು ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆ ಹೆಚ್ಚಿಸುತ್ತದೆ.

ಎಣ್ಣೆಯ ಅತಿಯಾದ ಬಳಕೆ

ನಿಮ್ಮ ಮನೆಯಲ್ಲಿ ಪಕೋಡ, ಹುರಿದ ಈರುಳ್ಳಿ, ಫ್ರೆಂಚ್ ಫ್ರೈ, ಹೆಪ್ಪುಗಟ್ಟಿದ ಆಹಾರ ಇತ್ಯಾದಿ ಸೇವಿಸಲು ನೀವು ಬಯಸಿದರೆ ಎಣ್ಣೆಯ ಹೆಚ್ಚಿನ ಬಳಕೆ ಮಾಡುತ್ತೀರಿ. ಆದರೆ ಎಣ್ಣೆಯ ಹೆಚ್ಚಿನ ಬಳಕೆ ಹೃದಯಾಘಾತ, ಪಾರ್ಶ್ವವಾಯು, ಸ್ತನ/ಅಂಡಾಶಯದ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಅನಾರೋಗ್ಯಕರ ತೂಕ ಮತ್ತು ಕೀಲು ನೋವಿನ ಅಪಾಯ ಉಂಟು ಮಾಡುತ್ತದೆ.

ಎಣ್ಣೆ, ಉಪ್ಪು ಅಥವಾ ಇತರೆ ಯಾವುದೇ ಆಹಾರ ಸೇವನೆಯು ಮಿತ ಪ್ರಮಾಣದಲ್ಲಿ ಇರಲಿ. ಆರೋಗ್ಯಕರ ಆಹಾರ ಆಯ್ಕೆಗೆ ಒತ್ತು ನೀಡಿ. ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ. ರಾಗಿ ಅಥವಾ ಗೋಧಿ ಹಿಟ್ಟು ಬಳಸಿ. ಆರೋಗ್ಯಕರ ಮತ್ತು ಫೈಬರ್-ಭರಿತ ಹಿಟ್ಟು ಬಳಸಿ. ಸಕ್ಕರೆ ಬದಲು ಬೆಲ್ಲ ಬಳಸಿ.Sugar maida salt white poisons

Related Post

Leave a Comment