ತೊಡೆಯ ಭಾಗದಲ್ಲಾಗುವ ಗಜಕರಣ , ಹುಳಕಡ್ಡಿ ಸಮಸ್ಯೆಗೆ ಈ ಗಿಡದ ಪೇಸ್ಟ್ ಮಂಗ ಮಾಯ ಮಾಡುತ್ತದೆ!

ಗಜಕರಣ ಇದು ಒಂದು ಚರ್ಮವ್ಯಾಧಿ ,ವಿಪರೀತ ತುರಿಕೆ ಆಗುತ್ತದೆ ,ಇದು ಬರಲು ಕಾರಣ ಬ್ಯಾಕ್ಟೀರಿಯಾ ಅಂದರೆ ಫಂಗಲ್ ಇನ್ಫೆಕ್ಷನ್ ಇಂದ ಬರುತ್ತದೆ.ಇದಕ್ಕೆ ಮುಖ್ಯ ಕಾರಣ ಸ್ವಚ್ಛತೆಯ ಕೊರತೆಯಿಂದ ಕ್ರಿಮಿಗಳು ದೇಹದಲ್ಲಿ ಅಟ್ಯಾಕ್ ಮಾಡುತ್ತವೆ
ಇದರಿಂದ ಚರ್ಮ ರೋಗ ಅಂದರೆ ಗಜಕರಣ ಉಂಟಾಗುತ್ತದೆ.ಇನ್ನು ಸಾಮಾನ್ಯವಾಗಿ ಹಸಿಯಾದ ಅಥವಾ ನೆಂದಿರುವ ಬಟ್ಟೆಗಳನ್ನು ಧಾರಣೆ ಮಾಡುವುದು ,ಬೆವರು ನಿಂತಲ್ಲೇ ನಿಲ್ಲುವುದು ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.ಇನ್ನು ಗಜಕರಣ ಸೊಂಟದ ಭಾಗದಲ್ಲಿ ಅಥವಾ ತೊಡೆ ಸಂಧಿಯಲ್ಲಿ ಅಥವಾ ಕಂಕಳು ಸಂಧಿಯಲ್ಲಿ , ಕುತ್ತಿಗೆಯ ಹಿಂಭಾಗದಲ್ಲಿ , ಕಿವಿಯ ಹಿಂಭಾಗದಲ್ಲಿ ,ಬೆವರು ನಿಲ್ಲುವಂತಹ ಜಾಗಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.ಹಾಗಾಗಿ ಬೆವರು ನಿಲ್ಲುವಂತಹ ಜಾಗಗಳನ್ನು ಅತಿಯಾಗಿ ಸ್ವಚ್ಛವಾಗಿಡುವುದು ಬಹಳ ಮುಖ್ಯವಾಗಿದೆ.

ಇನ್ನು ಈ ಗಜಕರಣವನ್ನು ಹೋಗಲಾಡಿಸಲು ಮನೆ ಮದ್ದು.

ಒಂದು ಮುಷ್ಠಿ ಬೇವಿನ ಸೊಪ್ಪಿನ ರಸಕ್ಕೆ ಒಂದು ಚಿಟಿಕೆ ಅರಿಷಿಣ ಪುಡಿ ಹಾಗೂ ಸ್ವಲ್ಪ ತುಳಸಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಈ ಪೇಸ್ಟನ್ನು ಗಜಕರಣ ಆಗಿರುವಂತಹ ಜಾಗಕ್ಕೆ ಲೇಪನವನ್ನು ಮಾಡಿ,
ಹೀಗೆ ಪ್ರತಿದಿನ 1 ವಾರಗಳ ಕಾಲ ಬೆಳಗ್ಗೆ ಸಂಜೆ ಮಾಡುತ್ತ ಬಂದರೆ ಕ್ರಮೇಣ ಗಜಕರಣ ವಾಸಿಯಾಗುತ್ತದೆ.

ಮಂಜಿಷ್ಟ ಬೇರು:ಈ ಬೇರನ್ನು ಸಾಣೆ ಕಲ್ಲಲಿ ತೇಯ್ದು ಅದರ ಗಂಧವನ್ನು ಗಜಕರಣ ಆಗಿರುವಂತಹ ಜಾಗಕ್ಕೆ ಹಚ್ಚುತ್ತಾ ಬಂದರೆ ಕ್ರಮೇಣ ಕಡಿಮೆಯಾಗುತ್ತದೆ.ಅರಿಶಿಣದ ಪುಡಿಯ ಕಷಾಯ:ಎರಡು ಲೋಟ ನೀರಿಗೆ ಒಂದು ಚಮಚ ಅರಿಶಿಣ ಹಾಕಿ ಒಂದು ಲೋಟ ಆಗುವವರೆಗೆ ಕುದಿಸಿ.ಈಗ ಆ ಕಷಾಯವನ್ನು ಗಜಕರಣ ಆಗಿರುವಂತ ಜಾಗಕ್ಕೆ ಹತ್ತಿಯ ಸಹಾಯದಿಂದ ಹಚ್ಚುತ್ತಾ ಬಂದರೆ ಕ್ರಮೇಣ ಕಡಿಮೆಯಾಗುತ್ತದೆ.

ಒಂದು ವೇಳೆ ಗಜಕರಣ ವಾಸಿಯಾಗದಿದ್ದಲ್ಲಿ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕ ಮಾಡಿ ,ನಿಮಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ.

ಧನ್ಯವಾದಗಳು.

Related Post

Leave a Comment