ನವರಾತ್ರಿ ಪೂಜೆ ಮಾಡುವವರು ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

Uncategorized

ನವರಾತ್ರಿ ಆರಂಭವಾದಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಈ ತಪ್ಪುಗಳನ್ನು ನೀವು ಮಾಡಿದರೆ ಕಷ್ಟಗಳು ತಪ್ಪಿದ್ದಲ್ಲ. ಪೂಜೆಯ ದೋಷಗಳು ನಿಮಗೂ ಉಂಟಾಗುತ್ತದೆ. ನೀವು ಮಾಡುವ ಸಂಕಲ್ಪ, ಪೂಜೆಗೆ ಫಲ ಸಿಗುವುದಿಲ್ಲ. ಶ್ರೀ ದುರ್ಗಾದೇವಿಯ ಅನುಗ್ರಹ ಪ್ರಾಪ್ತಿಯಾಗಬೇಕು ಅನ್ನುವುದಾದರೆ ನವರಾತ್ರಿಯ ಮೊದಲ ದಿನ ಈ ಮಂತ್ರವನ್ನು ಹೇಳಬೇಕು ಹಾಗೂ ನವರಾತ್ರಿ ಮೊದಲ ದಿನ ಈ ತಪ್ಪುಗಳನ್ನು ಮಾಡಬಾರದು.

1,ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ಈ ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ನವರಾತ್ರಿಯ ಒಂಬತ್ತು ದಿನಗಳು ಕೂಡಾ ತಲೆಯ ಕೂದಲನ್ನು ಬಿಟ್ಟುಕೊಂಡು ಮನೆಯಲ್ಲಿ ಓಡಾಡಬಾರದು. ಮುಖ್ಯದ್ವಾರದ ಬಳಿ ನಿಂತುಕೊಂಡು ತಲೆಯನ್ನು ಬಾಚಿ ಕೊಳ್ಳಬಾರದು. ಈ ತಪ್ಪನ್ನು ಯಾವುದೇ ಕಾರಣಕ್ಕೂ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾಡಬಾರದು.

2, ಮನೆಯಲ್ಲಿ ಇರುವವರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಪೂಜೆಯನ್ನು ಮಾಡುವುದಾಗಲಿ ದಿನವನ್ನು ಕಳೆಯುವುದಗಲಿ ಮಾಡಬಾರದು. ಕಪ್ಪು ಬಣ್ಣದ ಬಟ್ಟೆಯನ್ನು ನವರಾತ್ರಿಯಲ್ಲಿ ಧರಿಸಬಾರದು.3, ಕ್ಷೌರದ ಕ್ರಿಯೆಗಳನ್ನು ನವರಾತ್ರಿ ಕಳೆಯುವ ತನಕ ಯಾವುದೇ ಕಾರಣಕ್ಕೂ ಮಾಡಿಸುವುದಕ್ಕೆ ಹೋಗಬಾರದು. ಇದರಿಂದ ದಾರಿದ್ರ್ಯ ದೋಷಗಳು ಹೆಚ್ಚಾಗುತ್ತವೆ.

4, ಸಂಸಾರಸ್ಥರು ಮದುವೆ ಆಗಿರುವಂತಹ ದಂಪತಿಗಳು ಒಂಬತ್ತು ದಿನಗಳ ಕಾಲ ಚಾಚೂತಪ್ಪದೆ ಬ್ರಹ್ಮಚರ್ಯವನ್ನು ಪಾಲಿಸಬೇಕು.5, ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಪೂಜೆಯ ಕೋಣೆಗೆ ಪ್ರವೇಶ ಮಾಡಬಾರದು.ನೀವು ದೇವರಿಗೆ ಕೇಳಿಕೊಳ್ಳುವ ಸಂಕಲ್ಪಗಳು ಫಲಗಳು ದೊರೆಯುವುದಿಲ್ಲ. ನವರಾತ್ರಿಯ ಒಂಬತ್ತು ದಿನಗಳು ಸ್ನಾನವನ್ನು ಮಾಡಿಕೊಂಡು ದೇವರ ಕೋಣೆಗೆ ಪ್ರವೇಶ ಮಾಡಬೇಕು ವರೆತು ಸ್ನಾನ ಮಾಡದೆ ಪೂಜೆ ಕೋಣೆಗೆ ಹೋಗಬಾರದು.

6, ಆದಷ್ಟು ಒಂಬತ್ತು ದಿನಗಳ ಕಾಲ ಕೋಪವನ್ನು ತ್ಯಾಗ ಮಾಡಬೇಕು. ಕೋಪವನ್ನು ಬಿಡಬೇಕು ಆಗಮಾತ್ರ ಶ್ರೀ ದುರ್ಗಾ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.ಕೆಲವರು ನವರಾತ್ರಿಯನ್ನು ಆಚರಿಸುತ್ತಾರೆ ಹಾಗೂ ಕೆಲವರು ನವರಾತ್ರಿಯನ್ನು ಆಚರಣೆ ಮಾಡದೆ ಯಾವ ರೀತಿ ನಿತ್ಯಪೂಜೆ ಮಾಡುತ್ತಾರೋ ಆ ರೀತಿಯಾಗಿ ಪೂಜೆಯನ್ನು ಮಾಡಿ ಸಂಕಲ್ಪವನ್ನು ಮಾಡುತ್ತಾರೋ ಮತ್ತು ಕೋಪವನ್ನು ಬಿಟ್ಟು ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾರೋ ಒಂಬತ್ತು ದಿನ ವಿಶೇಷವಾಗಿ ಕಳೆದಿದೆ ಆದಲ್ಲಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹ ಮನೆಗೆ ಆಗುತ್ತದೆ. ಈ ಎಲ್ಲ ತಪ್ಪುಗಳನ್ನು ನವರಾತ್ರಿಯ ದಿನದಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದು.

ಇವತ್ತು ಶ್ರೀ ಶೈಲಾ ಪುತ್ರಿ ಅವತಾರವನ್ನು ದುರ್ಗಾಮಾತೆಯ ಹೆಸರಲ್ಲಿ ಪೂಜೆಯನ್ನು ಮಾಡುತ್ತಾರೆ. ಶ್ರೀ ಚಾಮುಂಡೇಶ್ವರಿ ದೇವಿ ದುರ್ಗಾ ದೇವಿಯ ಅನುಗ್ರಹವಾಗಬೇಕು ಎಂದರೆ ದುರ್ಗಾದೇವಿಯ ಮುಂದೆ ತುಪ್ಪ ಅಥವಾ ಪಾಯಸವನ್ನು ಇಟ್ಟು ನೈವೇದ್ಯ ಮಾಡಬೇಕು. ಜೊತೆಗೆ ಈ ಶಕ್ತಿಶಾಲಿ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಬೇಕು.ನಿಮ್ಮ ಕಷ್ಟಗಳನ್ನು ಶ್ರೀ ಚಾಮುಂಡೇಶ್ವರಿ ಮುಂದೆ ಹೇಳಬೇಕು.” ಓಂ ರಿಂ ಶ್ರೀಂ ಶೈಲಪುತ್ರಿ ದುರ್ಗಾಯೇ ನಮಃ “

ಈ ಮಂತ್ರವನ್ನು ಹೇಳಿಕೊಂಡು ನವರಾತ್ರಿಯ ಮೊದಲ ದಿನವನ್ನು ಮುಗಿಸಿ ನೋಡಿ. ಸುಖ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.ವಿಶೇಷವಾಗಿ ದಾಸವಾಳವನ್ನು ದೇವಿಗೆ ಅರ್ಪಿಸಿ.ಪೂಜೆ ಮಾಡಿದ ಫಲ ಸಿಕ್ಕರೆ ಮನೆಯಲ್ಲಿ ಕಲಹಗಳು ಸಿಗುತ್ತವೆ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿ ತೊಲಗುತ್ತದೆ.

Leave a Reply

Your email address will not be published.