ಬೇಸಿಗೆಯಲ್ಲಿ ಮಹಿಳೆಯರಿಗೆ ಸೀಕ್ರೆಟ್ ಟಿಪ್ಸ್ ನ್ಯಾಚುರಲ್ ಅರೋಗ್ಯವಾಗಿ ಅಂದವಾಗಿ ಕಾಣಲು!

ಮಾಲಿನ್ಯ, ತ್ವರಿತವಾಗಿ ಬದಲಾಗುವ ಹವಾಮಾನ , ಧೂಳು ಇತ್ಯಾದಿಗಳು ದೈಹಿಕ ಆರೋಗ್ಯದ ಜೊತೆ ಜೊತೆಯೇ ನಮ್ಮ ಚರ್ಮದ ಮೇಲೆ, ಸೌಂದರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಹೀಗಾಗಿ ಋತುವಿಗೆ, ಹವಮಾನಕ್ಕೆ ತಕ್ಕ ಹಾಗೇ ನಮ್ಮ ಚರ್ಮದ ಆರೈಕೆ ಇರಬೇಕು. ಮಳೆಗಾಲದ ವಾತಾವರಣ ಒಂದು ರೀತಿಯಲ್ಲಿ ನಮ್ಮ ಚರ್ಮದ ಮೇಲೆ ಪರಿಣಾಮ ಬೀರಿದರೆ ಈ ಚಳಿಗಾಲ ಮತ್ತು ಬೇಸಿಗೆ ಕಾಲ ತ್ವಚೆಯನ್ನು ಹೆಚ್ಚು ಹಾನಿಗೊಳಿಸುತ್ತವೆ. ಹೀಗೆ ಚಳಿಗಾಲ ಮುಗಿದು ಬಿರು ಬಿಸಿಲು ಆರಂಭವಾಗಿದೆ. ಬದಲಾಗುವ ಹವಮಾನ, ವಸಂತ ಋತುವಿನಲ್ಲಿ ತ್ವಚೆಯ ದಿನಚರಿ ಹೇಗಿರಬೇಕು ಎಂಬ 7 ಸೌಂದರ್ಯ ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ.

ಸ್ಕಿನ್ ಎಕ್ಸ್‌ಫೋಲಿಯೇಟ್ ಮಾಡಿ—ನಿಮ್ಮ ಮಂದ ತ್ವಚೆ ಫಳಫಳ ಅಂತಾ ಹೊಳಿಯಲು ನೀವು ಡ್ರೈ ವಾತಾವರಣದಲ್ಲಿ ನಿಮ್ಮ ಚರ್ಮಕ್ಕೆ ವಾರಕ್ಕೆ ಒಂದು ಅಥವಾ ಗರಿಷ್ಠ ಎರಡು ಬಾರಿ ಮೃದುವಾದ ಸ್ಕ್ರಬ್‌ ನಿಂದ ಎಕ್ಸ್‌ಫೋಲಿಯೇಟ್ ಮಾಡುವುದು ಅತ್ಯಗತ್ಯ. ಇದು ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

ಸನ್‌ಸ್ಕ್ರೀನ್‌ ಹೆಚ್ಚಾಗಿ ಬಳಸಿ–ದೇಹಕ್ಕೆ ನೀರು ಎಷ್ಟು ಮುಖ್ಯವೋ ದೇಹದ ಚರ್ಮಕ್ಕೆ ಸನ್‌ಸ್ಕ್ರೀನ್‌ ಅಷ್ಟೇ ಮುಖ್ಯ. ನೀವೂ ತ್ವಚೆಗೆ ಸನ್‌ಸ್ಕ್ರೀನ್‌ ಹಚ್ಚದೇ ಬೇರೆ ಏನೇ ಆರೈಕೆ ಮಾಡಿದರೂ ಅದು ವ್ಯರ್ಥ. ಹೀಗಾಗಿ ಎಲ್ಲಾ ಋತುಮಾನದಲ್ಲೂ, ಹೊರಗೆ ಹೋಗಲಿ ಬಿಡಲಿ ಮನೆಯಲ್ಲಿದ್ದರೂ ಸಹ ಸನ್‌ಸ್ಕ್ರೀನ್‌ ಬಳಸಿ. ಇದು ಹಾನಿಕಾರಕ ಯುವಿ ಕಿರಣಗಳು ಚರ್ಮವನ್ನು ಹಾನಿಗೊಳಿಸದಂತೆ ಕಾಪಾಡುತ್ತದೆ. ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುವ ಸನ್‌ಬ್ಲಾಕ್ ಅಥವಾ ಸನ್‌ಸ್ಕ್ರೀನ್ ಕ್ರೀಮ್ ಅನ್ನು ನೀವು ಬಳಸಬಹುದು.

ನಿಮ್ಮನ್ನು ಹೈಡ್ರೇಟ್‌ ಮಾಡಿಕೊಳ್ಳಿ–ಇನ್ನೇನೂ ಬೇಸಿಗೆ ಆರಂಭವಾಗುವುದರಿಂದ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. ಹೆಚ್ಚಿನ ನೀರು ಸೇವನೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೇ ತ್ವಚೆಗೆ, ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಮುಖ್ಯವಾಗಿ ಹೆಚ್ಚು ನೀರು ಸೇವನೆ ಚರ್ಮವನ್ನು ಪೋಷಣೆ ಮಾಡುತ್ತದೆ. ಹೀಗಾಗಿ ನಿಮ್ಮ ದೇಹ ಮತ್ತು ಚರ್ಮವನ್ನು ಯಾವಾಗಲೂ ನೀರು, ಹಣ್ಣಿನ ರಸಗಳಿಂದ ಹೈಡ್ರೇಟ್‌ ಮಾಡಿಕೊಳ್ಳಿ.

ಲೈಟ್ ಮಾಯಿಶ್ಚರೈಸರ್ ಬಳಸಿ‌—ಸನ್‌ಸ್ಕ್ರೀನ್‌, ಮಾಯಿಶ್ಚರೈಸರ್ ಎಲ್ಲಾ ಚರ್ಮಕ್ಕೆ ಅಗತ್ಯವಾಗಿ ಬೇಕಾದ ಆರೈಕೆಗಳು. ಹೀಗಾಗಿ ಇದನ್ನು ಕೂಡ ನಿಯಮಿತವಾಗಿ ಬಳಸಲೇಬೇಕು. ಬೇಸಿಗೆ ಶುರು ಆಗುತ್ತಿರುವುದರಿಂದ ನೀವು ಈ ಸಮಯದಲ್ಲಿ ಲೈಟ್ ಮಾಯಿಶ್ಚರೈಸರ್‌ಗಳನ್ನು ಆರಿಸಿಕೊಳ್ಳಬೇಕು. ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಚರ್ಮವನ್ನು ಆರೋಗ್ಯಕರವಾಗಿ ಇರಿಸುತ್ತದೆ.

ನಿಮ್ಮ ಸೌಂದರ್ಯ ಉತ್ಪನ್ನಗಳನ್ನು ಬದಲಾಯಿಸಿ–ಮೊದಲೆ ಹೇಳಿದಂತೆ ಹವಮಾನಕ್ಕೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ ಇರಬೇಕು. ಈಗ ಬೇಸಿಗೆ ಶುರುವಾದ ಕಾರಣ ಚಳಿಗಾಲದಂತೆ ನಮ್ಮ ಸ್ಕಿನ್‌ ಕಾಳಜಿ ವಹಿಸಬಾರದು. ಬೇಸಿಗೆಗೆ ಹೊಂದಿಕೆಯಾಗುವಂತೆ ನಿಮ್ಮ ಚರ್ಮದ ಕಾಳಜಿಯನ್ನು ಮಾಡಬೇಕು. ಅದಕ್ಕೆ ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಹೊಂದುವ ಸೌಂದರ್ಯ ಉತ್ಪನ್ನಗಳನ್ನು ನೀವು ಬಳಸಬೇಕು. ನಿಮ್ಮ ಮೇಕಪ್ ಬ್ರಷ್‌ಗಳು, ಸ್ಪಂಜುಗಳಿಂದ ಹಿಡಿದು ಮಾಯಿಶ್ಚರೈಸರ್‌, ಟೋನರ್‌, ಲೋಷನ್‌ ಎಲ್ಲವನ್ನೂ ಬದಲಾಯಿಸಬೇಕು.

ಮನೆಯಲ್ಲಿ ತಯಾರಿಸಿದ ಹಣ್ಣಿನ ಸಿಪ್ಪೆಗಳ ಫೇಸ್‌ ಫ್ಯಾಕ್‌ಗಳನ್ನು ಪ್ರಯತ್ನಿಸಿ–ನೈಸರ್ಗಿಕವಾದ ಮನೆಮದ್ದು ಯಾವಾಗಲೂ ಉತ್ತಮವಾಗಿರುತ್ತದೆ. ಅಂತೆಯೇ ಬೇಸಿಗೆಯಲ್ಲಿ ಹೇರಳವಾಗಿ ಹಣ್ಣುಗಳು ಸಿಗುವುದಿಂದ ಅವುಗಳಿಂದ ಫೇಸ್‌ ಪ್ಯಾಕ್‌ಗಳನ್ನು ಮುಖಕ್ಕೆ ಅನ್ವಯಿಸಿ. ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅಂಡರ್ ಐ ಕ್ರೀಮ್ ಗಳನ್ನು ನಿಯಮಿತವಾಗಿ ಬಳಸಿ—ಬೇಸಿಗೆಯಲ್ಲಿ ಹೆಚ್ಚು ಬಿಸಿಲು, ಧೂಳು, ಮಾಲಿನ್ಯ ಇರುವುದಿಂದ ನಿಮ್ಮ ಮುಖವು ಕೊಳಕು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತದೆ. ಹೀಗಾಗಿ ನಿಮ್ಮ ಕಣ್ಣಿನ ಕೆಳಗಿನ ಚರ್ಮವನ್ನು ಅರೈಕೆ ಮಾಡಬೇಕಾಗುತ್ತದೆ. ನಿಮ್ಮ ಕಣ್ಣಿನ ಚರ್ಮ ಮುಖದ ಅತ್ಯಂತ ಸೂಕ್ಷ್ಮವಾದ ಭಾಗವಾಗಿರುವುದರಿಂದ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಉತ್ತಮ ತ್ವಚೆಗಾಗಿ ಮಲಗುವಾಗ ಮುನ್ನ ಕಣ್ಣಿನ ಕೆಳಗೆ ಐ ಕ್ರೀಮ್ ಮತ್ತು ಎಣ್ಣೆಯನ್ನು ಹಚ್ಚು ಅಭ್ಯಾಸ ಮಾಡಿಕೊಳ್ಳಿ.

Related Post

Leave a Comment