ಬೆಳಗ್ಗೆ ಎದ್ದ ನಂತರ ಮಾಡುವ 7 ತಪ್ಪುಗಳು!

7 mistakes made after waking up in the morning :ನಾವು ಎದ್ದ ಬಳಿಕ ಮಾಡುವಂತಹ ಕೆಲಸಗಳು ದಿನವಿಡಿ ನಮ್ಮ ಶಕ್ತಿಗೆ ಪೂರಕವಾಗಿ ಇರುವುದು. ಅಂತಹ ಕಾರ್ಯಗಳು ಯಾವುದೆಂದು ತಿಳಿಯಿರಿ.
ಬೆಳಗ್ಗೆ ಎದ್ದ ಕೂಡಲೇ ನಾವು ನಿತ್ಯಕರ್ಮಗಳನ್ನು ಪೂರೈಸಿಕೊಂಡು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ಆ ದಿನವು ಉತ್ತಮವಾಗಿರಲಿ ಎಂದು ಪ್ರತಿಯೊಬ್ಬರು ಮನಸ್ಸಿನಲ್ಲಿ ಪ್ರಾರ್ಥಿಸುವರು. ಆದರೆ ಕೆಲವು ಜನರು ತುಂಬಾ ಕೆಟ್ಟ ಮನಸ್ಥಿತಿಯೊಂದಿಗೆ ಎದ್ದೇಳುತ್ತಾರೆ. ಇದರಿಂದಾಗಿ ಅವರ ಸಂಪೂರ್ಣ ದಿನ ಕೆಟ್ಟದಾಗಿರಬಹುದು.

ಹೀಗಾಗಿ ನಾವು ಬೆಳಗ್ಗೆ ಎದ್ದ ಬಳಿಕ ಕೆಲವೊಂದು ಒಳ್ಳೆಯ ಕ್ರಮಗಳನ್ನು ಅಳವಡಿಸಿಕೊಂಡರೆ ಅದು ಖಂಡಿತವಾಗಿಯೂ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ನೆರವಿಗೆ ಬರುವುದು. ಆದರೆ ಬಳಗ್ಗೆ ಮಾಡುವಂತಹ ಕೆಲವು ಕೆಟ್ಟ ಕ್ರಮಗಳನ್ನು ಕೈಬಿಡಬೇಕು. ಆ ಕ್ರಮಗಳು ಈ ರೀತಿಯಾಗಿ ಇವೆ.

ಅವಸರದಲ್ಲಿ ಎದ್ದು ಜಿಮ್ ಗೆ ಹೋಗುವುದು
ಮುಂಜಾನೆಯ ಮುದವಾದ ನಿದ್ರೆಯಿಂದ ಎದ್ದೇಳಲು ನಮಗೆಲ್ಲರಿಗೂ ತುಂಬಾ ಕಷ್ಟವಾಗುವುದು. ಆದರೆ ನೀವು ನಿಧಾನವಾಗಿ ಎದ್ದ ಬಳಿಕ ಸ್ನಾಯುಗಳನ್ನು ಸ್ವಲ್ಪ ಅಲುಗಾಡಿಸಿ. ನೀವು ಎದ್ದ ಬಳಿಕ ಬಲದ ಬದಿಗೆ ತಿರುಗಿ, ಎದ್ದೇಳಿ ಎಂದು ಹೇಳಲಾಗುತ್ತದೆ. ಇದರಿಂದ ಶಕ್ತಿಯ ಹರಿವಿನ ಸಮತೋಲನ ಕಾಪಾಡಬಹುದು ಎಂದು ಯೋಗ ತಜ್ಞರು ಹೇಳುತ್ತಾರೆ.

ಆದರೆ ನಾವು ಕೆಲವೊಂದು ಸಲ ಇದಕ್ಕೆ ವಿರುದ್ಧವಾಗಿ ಎದ್ದ ಪರಿಣಾಮವಾಗಿ ದಿನವಿಡಿ ನಮ್ಮ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವುದು. ಹೀಗೆ ದೀರ್ಘಕಾಲಕ್ಕೆ ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಎದ್ದು ಕುಳಿತುಕೊಂಡು ಸ್ವಲ್ಪ ಮೌನವಾಗಿರಿ, ದೀರ್ಘವಾಗಿ ಉಸಿರಾಡಿ ಮತ್ತು ನೀರು ಕುಡಿಯಿರಿ. ಅವಸರದಲ್ಲಿ ಎದ್ದು ಜಿಮ್ ಗೆ ಹೋಗುವುದು ಕೂಡ ತಪ್ಪು ಎನ್ನಲಾಗುತ್ತದೆ.

ಒಂದು ಕಪ್ ಟೀ ಅಥವಾ ಕಾಫಿ

ಒಂದು ಕಪ್ ಟೀ ಅಥವಾ ಕಾಫಿ ಹೆಚ್ಚಿನವರು ಎದ್ದ ಬಳಿಕ ಕುಡಿಯುವ ಮೊದಲ ಪಾನೀಯ. ಆದರೆ ದೇಹಕ್ಕೆ ಕ್ಷಾರೀಯವಾಗಿರುವುದನ್ನು ಕುಡಿದರೆ ಒಳ್ಳೆಯದು. ಟೀ ಅಥವಾ ಕಾಫಿಯಂತಹ ಆಮ್ಲೀಯ ಗುಣ ಹೊಂದಿರುವಂತಹ ಪಾನೀಯದೊಂದಿಗೆ ದಿನದ ಆರಂಭ ಮಾಡಬೇಡಿ. ಮೊದಲಿಗೆ ಲಿಂಬೆ ರಸ ಮತ್ತು ನೀರು ಕುಡಿಯಿರಿ. ಇದರ ಬಳಿಕ ಟೀ ಅಥವಾ ಗ್ರೀನ್ ಟೀ ಕುಡಿಯಿರಿ.

ಮೊಬೈಲ್ ವೀಕ್ಷಿಸುವುದು

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ದೇವರಿಗೆ ನಮಸ್ಕಾರ ಮಾಡುವ ಬದಲು ಮೊಬೈಲ್ ಕೈಗೆತ್ತಿಕೊಂಡು ಅದರಲ್ಲಿ ಏನಾಗಿದೆ ಎಂದು ತಿಳಿಯುವರು. ಆದರೆ ಇದರಿಂದ ನೀವು ದಿನವಿಡಿ ಮನಸ್ಥಿತಿ ಕೆಡಿಸಬಹುದು. ಕೆಲವರು ಕಚೇರಿಯ ಈ ಮೇಲ್ ಅಥವಾ ಬೇರೆ ಮೆಸೇಜ್ ನೋಡಬಹುದು.

ಆದರೆ ಕಚೇರಿಗೆ ಹೋದ ಬಳಿಕವೇ ನೀವು ಇದನ್ನು ನೋಡಿ. ಈ ಮೇಲ್ ನೋಡಿದರೆ ಅದರಿಂದ ನಿಮ್ಮ ದೈನಂದಿನ ಉತ್ಪಾದಕತೆ ಮೇಲೆ ಪರಿಣಾಮ ಬೀರುವುದು. 20 ನಿಮಿಷ ವ್ಯಾಯಾಮ, 20 ನಿಮಿಷ ಧಾನ್ಯ ಮತ್ತು 20 ನಿಮಿಷ ಓದುವುದು ತುಂಬಾ ಒಳ್ಳೆಯದು ಎಂದು ತಜ್ಞರ ಸಲಹೆ.

ಉಪಾಹಾರ ಸೇವಿಸದೆ ಇರುವುದು

ಉಪಾಹಾರ ಬಿಟ್ಟರೆ ಅದರಿಂದ ಮಧುಮೇಹ ಬರುವುದು ಮತ್ತು ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗುವುದು ಎಂದು ಅಧ್ಯಯನಗಳು ಹೇಳಿವೆ. ಉಪಾಹಾರ ತ್ಯಜಿಸಿದರೆ ಅದರಿಂದಾಗಿ ನೀವು ಬೇರೆ ಕೆಟ್ಟ ಆಹಾರ ಸೇವಿಸಬಹುದು. ಇದರಿಂದ ಆರೋಗ್ಯದ ಮೇಲೆ ಪರಿಣಾಮವಾಗುವುದು. ಉಪಾಹಾರವನ್ನು ರಾಜನಂತೆ ತಿನ್ನಬೇಕು ಎನ್ನುವ ಮಾತಿದೆ.

ಬೆಳಗ್ಗಿನ ಅವಧಿಯಲ್ಲಿ ರಕ್ತದ ಸಕ್ಕರೆ ಮಟ್ಟವು ತುಂಬಾ ಕೆಳಮಟ್ಟದಲ್ಲಿ ಇರುತ್ತದೆ. ನಾವು ಎದ್ದ ಅರ್ಧ ಗಂಟೆ ತನಕ ಏನೂ ತಿನ್ನದೆ ಇದ್ದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕುಸಿಯುವುದು.

ಇದರಿಂದ ನೀವು ದಿನವಿಡಿ ನಿಶ್ಯಕ್ತಿಯಿಂದ ಬಳಲುವಿರಿ. ಚಾಗೆ ಸಕ್ಕರೆ ಹಾಕುವುದು ಮತ್ತು ಬಿಸ್ಕಿಟ್ ಸೇವಿಸುವುದು. ನೆನೆಸಿದ ಬಾದಾಮಿ, ಇಡೀ ಧಾನ್ಯದ ಬ್ರೆಡ್ ಅಥವಾ ಸ್ವಲ್ಪ ಹಣ್ಣುಗಳನ್ನು ತಿನ್ನಿ ಎಂದು ತಜ್ಞರು ಹೇಳುತ್ತಾರೆ.

ರೇಗುತ್ತಾ ಎದ್ದೇಳಬೇಡಿ

ಪ್ರತಿಯೊಬ್ಬರು ಬೆಳಗ್ಗಿನ ಅವಧಿಯಲ್ಲಿ ತುಂಬಾ ವ್ಯಸ್ತರಾಗಿ ಇರುವರು. ಹೀಗಾಗಿ ಅವರು ತಮ್ಮ ಮನೆಕೆಲಸದವರಿಗೆ ಬೈಯ್ಯುವರು, ಟ್ರಾಫಿಕ್ ಗೆ ಶಾಪ ಹಾಖುವರು ಮತ್ತು ತಮ್ಮ ಸುತ್ತಲಿನವರ ಮೇಲೆ ರೇಗುವರು. ಅದರೆ ಇದು ಒಳ್ಳೆಯದಲ್ಲ.

ಯಾಕೆಂದರೆ ಬೆಳಗ್ಗೆ ನೀವು 20 ನಿಮಿಷ ಕಾಲ ಕೋಪಿಸಿದರೆ ಆಗ ನಿಮ್ಮ ಇಡೀ ದಿನ ಕೆಟ್ಟದಾಗಿರುತ್ತದೆ. ನಿಮ್ಮಲ್ಲಿನ ಧನಾತ್ಮಕ ಶಕ್ತಿಯನ್ನು ಇದು ತಡೆಯುವುದು. ಹೀಗಾಗಿ ನೀವು ಬೆಳಗ್ಗ ಸಂತೋಷದಿಂದ ಎದ್ದೇಳಿ. ಬೇಗನೆ ಎದ್ದರೆ ಆಗ ಹಕ್ಕಿಗಳ ಚಿಲಿಪಿಲಿ, ಪ್ರಕೃತಿಯ ಇತ ಸದ್ದು ಕೇಳಬಹುದು. ಇದು ಮನಸ್ಸಿಗೆ ಮುದ ನೀಡುವುದು.

ಮುಂಚಿನ ದಿನ ಯೋಜನೆ ಹಾಕದೆ ಇರುವುದು

ಜನರು ಮುಂಚಿನ ದಿನವೇ ಯೋಜನೆ ಹಾಕಿಕೊಳ್ಳದೆ ಇರುವುದು ದೊಡ್ಡ ತಪ್ಪು ಎಂದು ತಜ್ಞರು ಹೇಳುತ್ತಾರೆ. ದಿನವಿಡಿ ದುಡಿದು ಸುಸ್ತಾಗಿ ಬಂದ ಬಳಿಕ ಮರುದಿನಕ್ಕೆ ಯೋಜನೆ ಹಾಕಿಕೊಳ್ಳುವುದು ಕಷ್ಟ. ಆದರೆ ನೀವು ಮೊದಲೇ ಬಟ್ಟೆ ಹಾಗೂ ಉಪಾಹಾರ, ಮಧ್ಯಾಹ್ನದ ಊಟದ ಬಗ್ಗೆ ಯೋಜನೆ ಹಾಕಿಕೊಂಡರೆ ಆಗ ಎಲ್ಲವೂ ಸರಿಯಾಗಿ ಇರುತ್ತದೆ.

ನಿಕೋಟಿನ್ ಅಥವಾ ಕೆಫಿನ್

ಹೆಚ್ಚಿನವರಿಗೆ ಹಾಸಿಗೆ ಬಿಟ್ಟು ಎದ್ದೇಳುವ ಮೊದಲೇ ಒಂದು ಧಮ್ ಎಳೆಯಬೇಕು ಅಥವಾ ಒಂದು ಸ್ಟ್ರಾಂಗ್ ಕಾಫಿ ಕುಡಿಯಲೇಬಕು. ಆದರೆ ನಮ್ಮ ದೇಹವು ಎಂಟು ಗಂಟೆಗಳ ಕಾಲ ಯಾವುದೇ ರೀತಿಯ ಪೋಷಕಾಂಶಗಳನ್ನು ಪಡೆಯದೆ ಇರುವುದರಿಂದ ಬೆಳಗ್ಗೆ ಸಿಗರೇಟ್ ಸೇದಿದರೆ ಅಥವಾ ಸ್ಟ್ರಾಂಗ್ ಕಾಫಿ ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು.

ಒಂದು ಲೋಟ ನೀರು ಕುಡಿಯುವ ಮೊದಲು ನೀವು ದೇಹಕ್ಕೆ ಬೇರೆ ಏನನ್ನೂ ನೀಡಬಾರದು. ಸಣ್ಣ ಹಣ್ಣು ಅಥವಾ ಸಕ್ಕರೆ ರಹಿತ ಬಿಸ್ಕಿಟ್ ಕೂಡ ಸ್ಟ್ರಾಂಗ್ ಕಾಫಿಗೆ ಮೊದಲು ತಿಂದರೆ ಅದು ಜೀರ್ಣಕ್ರಿಯೆ ವ್ಯವಸ್ಥೆ ರಕ್ಷಿಸುವುದು.7 mistakes made after waking up in the morning

Related Post

Leave a Comment