ನವರಾತ್ರಿ ಮೊದಲ ದಿನ ಕಳಸ ಘಟಸ್ಥಾಪನೆ ಮಾಡುವ ಸರಿಯಾದ ವಿಧಾನ/ಗಂಗೆ ಪೂಜೆ!

Featured-article

2022 ರ ಸೆಪ್ಟೆಂಬರ್ 26, ಸೋಮವಾರ 9 ದಿನಗಳ ಕಾಲ ನವರಾತ್ರಿ ಹಬ್ಬ ಆರಂಭವಾಗುವುದು. ನವರಾತ್ರಿ ಹಬ್ಬದ ಮೊದಲ ದಿನವೇ ಕಳಶ ಸ್ಥಾಪನೆ ಅಥವಾ ಕಳಸ ಘಟಸ್ಥಾಪನೆಯನ್ನು ಮಾಡಿ 9 ದಿನಗಳವರೆಗೆ ಕಲಶವನ್ನು ಪೂಜಿಸಲಾಗುತ್ತದೆ.ನವರಾತ್ರಿ ಕಳಸ ಸ್ಥಾಪನಾ ವಸ್ತುಗಳು-ಮೊದಲು ಪೀಠದ ಮೇಲೆ ಅಷ್ಟ ದಳ ಪದ್ಮ ರಂಗೋಲಿ ಹಾಕಬೇಕು.ರಂಗೋಲಿ ಮೇಲೆ ಅಕ್ಷತೆ, ಪಚ್ಚ ಕರ್ಪೂರ, ಜವಾದ್ ಪೌಡರ್ ಹಾಕಬೇಕು ಹಾಗು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಒಂದು ಪ್ಲೇಟ್ ನಲ್ಲಿ 5 ಇಡೀ ಅಕ್ಕಿಯನ್ನು ತೆಗೆದುಕೊಳ್ಳಿ. ಅದರ ಮೇಲೆ ಸ್ವಸ್ತಿಕ್ ಚಿಹ್ನೆ ಶ್ರೀಂ ಎಂದು ಬರೆಯಬೇಕು.

ನಂತರ ಮಾಂಗಲ್ಯವನ್ನು ಸಿದ್ಧತೆ ಮಾಡಿಕೊಳ್ಳಬೇಕುಕಂಕಣ ಸಿದ್ಧತೆ ಮಾಡಿಕೊಳ್ಳಿ.-ಎರಡು ವೀಳ್ಯದೆಲೆಯ ಮೇಲೆ ಸ್ವಸ್ತಿಕ್,ಚಿಹ್ನೆ ಬರೆದು ಇಟ್ಟುಕೊಳ್ಳಬೇಕು.ಗಂಗಾಜಲ ಅಥವಾ ಪವಿತ್ರ ನೀರು, ರೋಸ್ ವಾಟರ್-ಕಲಶಕ್ಕೆ ಹಾಕಲು ಬೆಳ್ಳಿ ನಾಣ್ಯಗಳು-ಸಣ್ಣ ಮಣ್ಣಿನ ಅಥವಾ ಹಿತ್ತಾಳೆ ಕಲಶ ಪವಿತ್ರ ದಾರ / ಮೊಲಿ / ಕಲವಾ ದಾರ ವೀಳ್ಯದೆಲೆ ಅಡಿಕೆ-ಅಕ್ಷತೆ ಸುಲಿದ ತೆಂಗಿನಕಾಯಿ ಕೆಂಪು ಬಟ್ಟೆ, ಹೂವುಗಳು ಮತ್ತು ಹೂವಿನ ಹಾರ ದುರ್ವಾ ಹುಲ್ಲು ಇತ್ಯಾದಿ

ಮೊದಲು ಗಣೇಶ ಪೂಜೆಯನ್ನು ಮಾಡಿಕೊಳ್ಳಬೇಕು. ನಂತರ ಗಣೇಶನಿಗೆ ಪ್ರಾರ್ಥನೆ ಮಾಡಿಕೊಳ್ಳಬೇಕು. 10 ದಿನ ಕಳಸ ಇಟ್ಟು ಅಖಂಡ ದೀಪರಾಧನೇ ಮಾಡುತ್ತೇನೆ ಯಾವುದೇ ರೀತಿ ವಿಘ್ನಗಳು ಬರಬಾರದು ಮತ್ತು ಕೋರಿಕೆಕೊಂಡ ವರ ಬೇಗಾ ಈಡೇರಲಿ ಎಂದು ಗಣೇಶನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಿ. ಗಣೇಶ ಪೂಜೆ ನಂತರ ಕಳಸ ಪ್ರತಿಷ್ಠಾಪಾನೇ ಮಾಡಬೇಕು.ಹಾಗೆಇನ್ನು ಮೊದಲ ದಿನ ಶೈಲ ಪುತ್ರಿ ಅಮ್ಮನವರ ಪೂಜೆಯನ್ನು ಮಾಡುತ್ತೇವೆ. ಇನ್ನು ಅಮ್ಮನವರಿಗೆ ಹಳದಿ ಬಣ್ಣದ ಹೂವು ತುಂಬಾನೇ ಪ್ರಿಯ.

ಕಳಸ ಸ್ಥಾಪಿಸುವ ವಿಧಾನ-ಅಗಲವಾದ ತಟ್ಟೆಯನ್ನು ತೆಗೆದುಕೊಂಡು, ಅದಕ್ಕೆ5 ಇಡೀ ಅಕ್ಕಿ ಸೇರಿಸಿ.ನಂತರ ವೀಳ್ಯದೆಲೆ ಇಟ್ಟು ಕಳಸವನ್ನು ಪ್ರತಿಷ್ಟಪನೆ ಮಾಡಬೇಕು. ಇನ್ನು ಗಂಗೆ ಪೂಜೆ ಮಾಡಿಕೊಂಡು ಅದನ್ನು ಕಳಸ ಸ್ಥಾಪನೆ ಮಾಡಿ ಪೂಜೆಯನ್ನು ಮಾಡಬಹುದು. ಕಳಸದ ಮೇಲೆ ಸುಣ್ಣ ಹಚ್ಚಬೇಕಾಗುತ್ತದೇ. ಏಕೆಂದರೆ ಅಮ್ಮನವರಿಗೆ ದೃಷ್ಟಿ ಆಗದೆ ಇರಲಿ. ನಂತರ ಕಂಕಣವನ್ನು ಕಟ್ಟಬೇಕು. ಕಳಸದ ಒಳಗೆ ಗಂಗಾ ಜಲ, ಗಂಜಲ, ರೋಸ್ ವಾಟರ್, ಬೆಳ್ಳಿ ಕಾಯಿನ್, ಅರಿಶಿನ ಕುಂಕುಮವನ್ನು ಹಾಕಿ ಸಂಕಲ್ಪ ಮಾಡಿಕೊಳ್ಳಿ. ನಂತರ 5 ವೀಳ್ಯದೆಲೆ ಹಾಗು ಬೇವಿನ ಸೊಪ್ಪು, ತೆಂಗಿನಕಾಯಿಯನ್ನು ಸಹ ಇಡಬೇಕು. ಕಾಯಿಗೆ ಅರಿಶಿನ ಕುಂಕುಮ ಹಚ್ಚಿ ಸಿದ್ಧತೆ ಮಾಡಿಕೊಳ್ಳಬೇಕು.

ನಂತರ ಗೆಜ್ಜೆ ವಸ್ತ್ರ,ಮಾಂಗಲ್ಯ ಮತ್ತು ಮುಖ ಪದ್ಮ ಹಾಕಿ ಹೂವಿನಿಂದ ಅಲಂಕಾರವನ್ನು ಮಾಡಬೇಕು.ಇನ್ನು ಒಂದು ನಿಂಬೆ ಹಣ್ಣನ್ನು ಸಂಕಲ್ಪ ಮಾಡಿ ಇಡಬೇಕು.ಒಂದು ವೇಳೆ ಚಾಮುಂಡೇಶ್ವರಿ ವಿಗ್ರಹ ಇಲ್ಲಾವಾದರೇ ಲಕ್ಷ್ಮಿ ಹಾಗು ಗಣೇಶನ ವಿಗ್ರಹ ಇಟ್ಟು ಪೂಜೆಯನ್ನು ಮಾಡಬೇಕು. ಅದರೆ ಅರಿಶಿನದಿಂದ ಮಾಡಿದ ಗೌರಿಯನ್ನು ಯಾವುದೇ ಕಾರಣಕ್ಕೂ ಇಡಬೇಡಿ.ಇದಿಷ್ಟು ಕಳಸ ಪ್ರತಿಷ್ಟಪನೆ ಮಾಡಲು ಬೇಕಾದ ಸಿದ್ಧತೆ. ಇದೆ ರೀತಿ 9 ದಿನ ಪೂಜೆಯನ್ನು ಮಾಡಿ ನಿಮಗೆ ಒಳ್ಳೆಯದಾಗುತ್ತದೆ.

Leave a Reply

Your email address will not be published.