ವಾಸ್ತು ವಿನ್ಯಾಸ! ಆಫೀಸ್ ಮನೆಯಲ್ಲಿ ಈ ದಿಕ್ಕಿಗೆ ಗಡಿಯಾರ ಹಾಕಿ!

Vastu Tips for office :ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಇರುತ್ತದೆ. ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಾನಗಳಲ್ಲಿ ಇರಿಸದೆ ಹೋದರೆ ಇವುಗಳು ಋಣಾತ್ಮಕ ಶಕ್ತಿಯನ್ನು ಬೀರುತ್ತವೆ.ಅದೇ ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳಗಳಲ್ಲಿ ಇರಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಬೀರುತ್ತದೆ. ಮನೆಯಲ್ಲಿ ಇರುವ ಸದಸ್ಯರ ಮಾನಸಿಕ ಸ್ವಸ್ತದ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಜೀವನದಲ್ಲಿ ಅತಿ ಹೆಚ್ಚು ಪ್ರಭಾವವನ್ನು ಈ ಗಡಿಯಾರ ಬೀರುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಸಮಯ ಒಂದೇ ರೀತಿ ಇರುವುದಿಲ್ಲ.ಏರಿಳಿತ ಇದ್ದೆ ಇರುತ್ತದೆ. ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದರ ಮುಖಾಂತರ ಸ್ವಲ್ಪ ನೆಮ್ಮದಿಯನ್ನು ಕಾಣಬಹುದು.

ಮನೆಯಲ್ಲಿ ಇರುವ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಹಾಕಿದರೆ ಜೀವನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಇದರ ಜೊತೆಗೆ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಹಾಕದೆ ಇದ್ದರೆ ಇದು ಕೂಡ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

1, ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರದ ಆಕಾರ ವೃತ್ತಕರ ಅಥವಾ ಮೊಟ್ಟೆಯ ಆಕಾರದಲ್ಲಿ ಇದ್ದಾರೆ ತುಂಬಾ ಒಳ್ಳೆಯದು. ಯಾವುದೇ ಕಾರಣಕ್ಕೂ ಗಡಿಯಾರದಲ್ಲಿ ದೇವರಫೋಟೋ ಇರಬಾರದು.ಇದು ಮನೆಯ ಸದಸ್ಯರ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ.2, ಗಡಿಯಾರವನ್ನು ಆಗಾಗ ಸ್ವಚ್ಛ ಮಾಡುತ್ತಾ ಇರಬೇಕು.ಸದಾ ಹೊಸ ಗಡಿಯಾರದಂತೆ ಇಟ್ಟಿರಬೇಕು.3, ಒಮ್ಮೆ ಹಾಳಾದ ಗಡಿಯಾರವನ್ನೂ ಮತ್ತೆ ಬಳಸಬಾರದು.ನಿಂತು ಹೋದ ಗಡಿಯಾರವನ್ನೂ ಮನೆಯಲ್ಲಿ ಇಟ್ಟುಕೊಳ್ಳಬಾರದು.

4, ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಹಾಕಬೇಕು. ಯಾವುದೇ ಕಾರಣಕ್ಕೂ ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಹಾಕಬಾರದು. ದಕ್ಷಿಣ ದಿಕ್ಕು ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ ದಕ್ಷಿಣ ದಿಕ್ಕು ಗಡಿಯಾರ ಹಾಕುವುದಕ್ಕೆ ಅಶುಭ ದಿಕ್ಕು ಎಂದು ಹೇಳಲಾಗಿದೆ. ಹಾಗಾಗಿ ಗಡಿಯಾರವನ್ನು ಉತ್ತರ ಪೂರ್ವ ಪಶ್ಚಿಮ ದಿಕ್ಕಿಗೆ ಹಾಕುವುದು ಒಳ್ಳೆಯದು. ಮುಖ್ಯವಾಗಿ ಗಡಿಯಾರವನ್ನು ಯಾವುದೇ ಕಾರಣಕ್ಕೂ ಮುಖ್ಯದ್ವಾರಕ್ಕೆ ಮತ್ತು ಓಡಾಡುವ ದ್ವಾರಗಳ ಮೇಲೆ ಹಾಕಬಾರದು. ಇದು ನಿಮ್ಮ ನಿತ್ಯದ ಕೆಲಸಗಳನ್ನು ಮಂದಗೊಳಿಸುತ್ತದೆ. ಕೆಲಸಗಳು ಬೇಗ ಸಾಗುವುದಿಲ್ಲ.

5, ಕ್ಯಾಲೆಂಡರ್ ಅನ್ನು ಪೂರ್ವ ಅಥವಾ ಉತ್ತರ ದಿಕ್ಕು ಗಳಲ್ಲಿ ಹಾಕಿದರೆ ಮನೆಯಲ್ಲಿ ವಾಸ್ತು ದೋಷ ಉಂಟಾಗುತ್ತದೆ. ಹೊಸ ಕ್ಯಾಲೆಂಡರ್ ಜೊತೆ ಹಳೆಯ ಕ್ಯಾಲೆಂಡರ್ ಅನ್ನು ಹಾಕಬಾರದು.6, ಗಡಿಯಾರದ ಸಮಯವನ್ನು ಹಿಂದಕ್ಕೆ ಇಡಬಾರದು ಮತ್ತು ಮುಂದಕ್ಕೂ ಇಡಬಾರದು. ಸರಿಯಾದ ಸಮಯವನ್ನು ಇಡಬೇಕು. ನಿಂತಿರುವ ಗಡಿಯಾರ ಮತ್ತು ಹಳೆಯ ಕ್ಯಾಲೆಂಡರ್ ಜೀವನದಲ್ಲಿ ಋಣಾತ್ಮಕತೆ ತುಂಬಿ ಆಗುವ ಕೆಲಸಗಳು ಕೆಟ್ಟು ಹೋಗುವಂತೆ ಮಾಡುತ್ತದೆ.7, ಮಲಗುವ ಕೋಣೆಯಲ್ಲಿ ಕ್ಯಾಲೆಂಡರ್ ಅನ್ನು ಯಾವುದೇ ಕಾರಣಕ್ಕೂ ಹಾಕಿಕೊಳ್ಳಬೇಡಿ.ಹಳೆಯ ಗಡಿಯಾರ ನಿಮ್ಮ ಮನೆಯಲ್ಲಿ ಇದ್ದರೆ ಅವಶ್ಯಕತೆ ಇದ್ದವರಿಗೆ ದಾನವನ್ನು ಮಾಡಿ. Vastu Tips for office

Related Post

Leave a Comment