ದಿನಕ್ಕೆ ಒಂದೆರಡು ಒಣ ಖರ್ಜೂರ ತಿಂದರೆ ಏನಾಗುತ್ತೆ ಗೊತ್ತಾ!

Health tips

ಚೆನ್ನಾಗಿ ಒಣಗಿಸಿದ ಖರ್ಜೂರವೇ ಒಣ ಖರ್ಜೂರ! ಹಸಿ ಖರ್ಜೂರಗಳಿಗೆ ಹೋಲಿಸಿದರೆ ಇದರಲ್ಲಿ ನೀರಿನಾಂಶ ಏನೂ ಇಲ್ಲದೇ ಇದ್ದರೂ, ಆರೋಗ್ಯಕ್ಕ ತುಂಬಾನೇ ಒಳ್ಳೆಯದು…

ನಿಮಗೆ ಈ ವಿಷಯಗಳು ಗೊತ್ತಿರಲಿ, ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿಗಳು, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್ ಗಳಾದ, ಬಾದಾಮ ಬೀಜಗಳು, ಒಣ ದ್ರಾಕ್ಷಿಗಳು, ಒಣಖರ್ಜೂರಗಳು ಇವುಗಳನ್ನು ಕೂಡ ಮಿತವಾಗಿ ಸೇವನೆ ಮಾಡಬೇಕೆಂದ ತಜ್ಞರೇ ಹೇಳುತ್ತಾರೆ.

ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ, ಇವುಗಳಲ್ಲಿ ವಿಶೇಷವಾದ ಪೌಷ್ಠಿಕಾಂಶ ಸತ್ವಗಳು ಹೇರಳವಾಗಿಸಿಗುವುದರಿಂದ, ವಿಶಿಷ್ಟವಾದ ಆರೋಗ್ಯ ಪ್ರಯೋಜನಗಳು ನಮ್ಮ ದೇಹಕ್ಕೆ ಸೇರಿದಂತಾಗುತ್ತದೆ. ಇದರಿಂದಾಗಿ ಹಲವಾರು ಕಾಯಿಲೆಗಳನ್ನು ಕೂಡ ದೂರ ಇಟ್ಟುಕೊಳ್ಳ ಬಹುದು. ಬನ್ನಿ ಇಂದಿನ ಲೇಖನದಲ್ಲಿ ಒಣ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎನ್ನುವುದರ ಬಗ್ಗೆ ನೋಡೋಣ…

ಒಣಖರ್ಜೂರದ ಪ್ರಯೋಜನಗಳು–ಖರ್ಜೂರಗಳಲ್ಲಿ ಆರೋಗ್ಯ ವೃದ್ಧಿಸುವ ಕ್ಯಾಲೋರಿಗಳು ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಇವುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಹೆಚ್ಚುತ್ತದೆ. ಅದರಲ್ಲೂ ವಿಶೇಷವಾಗಿ ಖರ್ಜೂರಗಳಲ್ಲಿ ನಾರಿನಾಂಶ ಹೇರಳವಾಗಿ ಕಂಡುಬರುವುದರಿಂದ, ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಎಲ್ಲಾ ಗುಣಲಕ್ಷಣಗಳನ್ನು ಕೂಡ ಇದು ಪಡೆದು ಕೊಂಡಿವೆ.

ಆರೋಗ್ಯದ ಗಣಿ!--ಸಾಮಾನ್ಯವಾಗಿ ಮಟಮಟ ಬಿಸಿಲಿನಲ್ಲಿ ಹಸಿ ಖರ್ಜೂರಗಳನ್ನು ಒಣಗಿಸುತ್ತಾರೆ. ಸರಿಯಾದ ಬಿಸಿಲಿನಿಂದಾಗಿ ಈ ಹಣ್ಣಿನಲ್ಲಿರುವಂತಹ ತೇವಾಂಶಗಳೆಲ್ಲಾ ಆವಿಯಾಗಿ, ಒಣ ಖರ್ಜೂರಗಳಾಗಿ ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಸೂರ್ಯನ ಬಿಸಿಲಿನಿಂದಾಗಿ ಅವುಗಳಲ್ಲಿ ವಿಟಮಿನ್-ಡಿ ಅಂಶ ಕೂಡ ಹೆಚ್ಚಾಗಿ ಶೇಖರಣೆ ಯಾಗಿರುತ್ತದೆ.

ಇನ್ನು ಮೊದಲೇ ಹೇಳಿದ ಹಾಗೆ ಖರ್ಜೂರಗಳಲ್ಲಿ ನಾರಿನ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುತ್ತದೆ. ಅದೇ ರೀತಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಬ್ಬಿಣದ ಅಂಶ, ಪೊಟ್ಯಾಶಿಯಂ ಅಂಶ, ಮೆಗ್ನೀಷಿಯಂ ಅಂಶ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ ಇದರಲ್ಲಿ ತುಂಬಾ ಹೇರಳವಾಗಿ ಕಂಡು ಬರುತ್ತದೆ.

ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ನಿಮಗೆ ಗೊತ್ತಿರಲಿ, ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯ ಹೆಚ್ಚು ಸದೃಢತೆಯಾಗಿರಲು, ಕ್ಯಾಲ್ಸಿಯಂ ಅಂಶದ ಅವಶ್ಯಕತೆ, ತುಂಬಾನೇ ಇರುತ್ತದೆ. ಹೀಗಾಗಿ ದಿನಕ್ಕೆ ಒಂದೆರಡು ಒಣ ಖರ್ಜೂರಗಳನ್ನು ಸೇವಿಸುವುದರಿಂದ, ನೈಸರ್ಗಿಕವಾಗಿ ಕ್ಯಾಲ್ಸಿಯಂ ಅಂಶ ಆರೋಗ್ಯಕ್ಕೆ ಸಿಕ್ಕಂತಾಗುತ್ತದೆ.

ಇದರಿಂದಾಗಿ ಮುಂದಿನ ದಿನಗಳಲ್ಲ ಹುಳುಕು ಹಲ್ಲು ಉಂಟಾಗುವುದು ಅಥವಾ ಮೂಳೆಗಳಲ್ಲಿ ಸದೃಢತೆ ಇಲ್ಲದೆ ಹೋಗುವುದು ಇಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಇನ್ನು ಇದರ ವಿಶೇಷತೆ ಏನೆಂದರೆ ವಯಸ್ಸಾದ ಮೇಲೆ ಕಂಡುಬರುವ ಅರ್ಥರೈಟಿಸ್ ಅಥವಾ ಸಂಧಿವಾತ ಸಮಸ್ಯೆಯನ್ನು ಕೂಡ ಇದು ದೂರ ಮಾಡುವ ಎಲ್ಲಾ ಆರೋಗ್ಯಕಾರಿ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಇನ್ನು ವಿಶೇಷವಾಗಿ ಮಕ್ಕಳಲ್ಲಿ ಬೆಳವಣಿಗೆಯ ಹಂತದಲ್ಲಿ ದೇಹದ ಮೂಳೆಗಳ ಅಭಿವೃದ್ಧಿಯಲ್ಲಿ ಇದರ ಪಾತ್ರ ಬಹಳ ದೊಡ್ಡದಾಗಿರುತ್ತದೆ.

ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಒಣ ಖರ್ಜೂರಗಳಲ್ಲಿ ಕೊಬ್ಬಿನ ಅಂಶ ತುಂಬಾನೇ ಕಡಿಮೆ ಇರುವುದರಿಂದ, ದೇಹದ ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಂತೆ ನೋಡಿಕೊಂಡು, ಹೃದಯ ಆರೋಗ್ಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ವಿಶೇಷವಾಗಿ ಇದರಲ್ಲಿ ಕಡಿಮೆ ಪ್ರಮಾಣದ ಸೋಡಿಯಮ್ ಅಂಶ ಇರುವ ಜೊತೆಗೆ, ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಅಂಶ ಇರುವ ಕಾರಣದಿಂದ, ದೇಹದ ರಕ್ತಸಂಚಾರದಲ್ಲಿ ಏರು ಪೇರಾಗದಂತೆ ನೋಡಿಕೊಂಡು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸಿ, ಹೃದಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ! ನೋಡಿ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಒಣ ಖರ್ಜೂರಗಳನ್ನು ದಿನಕ್ಕೆ ಒಂದೆರೆಡು ಬಾರಿಯಾದರೂ ಸೇವಿಸಲು ಮರೆಯದಿರಿ!

ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅಂಶ

ಖರ್ಜೂರಗಳಲ್ಲಿ ನೈಸರ್ಗಿಕ ರೂಪದ ಸಿಹಿಯ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಎಂಬ ಎರಡು ಸಂಯುಕ್ತ ಅಂಶಗಳು. ಇವು ನಮಗೆ ಶಕ್ತಿಯನ್ನು ನೀಡುವುದರ ಜೊತೆಗೆ, ಸುಸ್ತು, ಆಯಾಸ, ನಿತ್ರಾಣದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಒಂದು ವೇಳೆ ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಖರ್ಜೂರಗಳನ್ನು ಸೇರಿಸಿಕೊಳ್ಳುವುದಕ್ಕೆ ಮುಂಚೆ ಒಮ್ಮೆ ವೈದ್ಯರ ಬಳಿ, ನಿಮ್ಮ ಆರೋಗ್ಯದ ಕುರಿತಾಗಿ ಮಾಹಿತಿ ಪಡೆದುಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *